ಬೆಳಗಾವಿ ಸುವರ್ಣಸೌಧ ಬಾಡಿಗೆಗೆ ಕೊಡಲು ಮುಂದಾದ ಸರ್ಕಾರ

ಬೆಳಗಾವಿಯಲ್ಲಿ ಸುವರ್ಣಗೌಧ ಕಟ್ಟಿ ಎರಡು ವರ್ಷ ಕಳೆಯುತ್ತಾ ಬಂದರೂ ಇಲ್ಲಿ ಯಾವುದೇ ಕಾಯಂ ಸರ್ಕಾರಿ ಕಚೇರಿಗಳು ಸ್ಥಳಾಂತರಗೊಂಡಿಲ್ಲ.
ಸುವರ್ಣಸೌಧ
ಸುವರ್ಣಸೌಧ
Updated on

ಬೆಳಗಾವಿ: ಬೆಳಗಾವಿಯಲ್ಲಿ ಸುವರ್ಣಗೌಧ ಕಟ್ಟಿ ಎರಡು ವರ್ಷ ಕಳೆಯುತ್ತಾ ಬಂದರೂ ಇಲ್ಲಿ ಯಾವುದೇ ಕಾಯಂ ಸರ್ಕಾರಿ ಕಚೇರಿಗಳು ಸ್ಥಳಾಂತರಗೊಂಡಿಲ್ಲ. ಅದಿನಿಂದ ಇಂದಿನವೆರೆಗೆ ಕೇವಲ ಚಳಿಗಾಲದ ಅಧಿವೇಶನ ಮಾತ್ರ ನಡೆಯುತ್ತಿದೆ. ಇದರ ಹೊರತಾಗಿ ಇಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಆದರೆ ಇದೀಗ ಆ ಕಟ್ಟಡವನ್ನು ಬಾಡಿಕೆ ಕೊಡುವ ಮೂಲಕ ಸದ್ಬಳಕೆ ಮಾಡಿಕೊಳ್ಳುಲು ಸರ್ಕಾರ ಮುಂದಾಗಿದೆ.

400 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸುವರ್ಣದೌಧದ ನಿರ್ವಹಣೆಗಾಗಿ ಸರ್ಕಾರ ಪ್ರತಿವರ್ಷ 5 ಕೋಟಿ ರುಪಾಯಿ ವೆಚ್ಚ ಮಾಡುತ್ತಿದೆ. ಈ ನಿರ್ವಹಣಾ ವೆಚ್ಚವನ್ನು ತಗ್ಗಿಸಿಕೊಳ್ಳಲು ಸುವರ್ಣಸೌಧವನ್ನು ಕೆಲವು ಸರ್ಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳಿಗೆ ಹಾಗೂ ಖಾಸಗಿ ಸಂಸ್ಥೆಗಳಿಗೆ ಬಾಡಿಗೆ ನೀಡಲು ಮುಂದಾಗಿದೆ.

2007ರಲ್ಲಿ ಬಿಜೆಪಿ ಸರ್ಕಾರ ಬೆಳಗಾವಿಯಿಂದ 13 ಕಿ.ಮೀ.ದೂರದಲ್ಲಿರುವ ಹಲಗ ಬಸ್ತವಾಡ ಗ್ರಾಮದಲ್ಲಿ, ಹುಬ್ಬಳ್ಳಿ-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 127 ಎಕರೆಯಲ್ಲಿ ಈ ಸುವರ್ಣಸೌಧವನ್ನು ನಿರ್ಮಿಸಿದೆ. ಈಗ ಅದು ಕೇವಲ 20 ದಿನ ಮಳೆಗಾಲ ಮತ್ತು ಚಳಿಗಾಲದ ಅಧಿವೇಶನಕ್ಕೆ ಮಾತ್ರ ಬಳಕೆಯಾಗುತ್ತಿದೆ.

ಸುವರ್ಣಸೌಧದ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ, ಪ್ರವಾಸಿಗರನ್ನು ಆಕರ್ಷಿಸಲು ಅಮ್ಯುಸ್‌ಮೆಂಟ್ ಪಾರ್ಕ್ ನಿರ್ಮಿಸಲು ಮುಂದಾಗಿದೆ. ಅಲ್ಲದೆ ಸುವರ್ಣಸೌಧದಲ್ಲಿರುವ ಬ್ಯಾಂಕ್ವೆಟ್ ಹಾಲನ್ನು ಸಭೆ ಸಮಾರಂಭಗಳಿಗೆ, ಸರ್ಕಾರಿ ಮತ್ತು ಶೈಕ್ಷಣಿಕ ತರಬೇತಿಗಳಿಗೆ ಬಾಡಿಗೆಗೆ ನೀಡಲು ಮುಂದಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಸರ್ಕಾರ, ಬೃಂದಾವನ ರೀತಿ ಸುವರ್ಣಸೌಧದ ಬಳಿ ಗಾರ್ಡನ್ ನಿರ್ಮಿಸಲಾಗುವುದು ಎಂದಿದ್ದಾರೆ. ಈ ಮೂಲಕ ಸರ್ಕಾರಕ್ಕೆ ವರ್ಷಕ್ಕೆ 4ರಿಂದ 5 ಕೋಟಿ ರುಪಾಯ ಆದಾಯ ಬರುವ ಸಾಧ್ಯತಿ ಇದೆ ಮತ್ತು ಈ ಹಣವನ್ನು ನಿರ್ವಹಣಾ ವೆಚ್ಚಕ್ಕೆ ಬಳಸಿಕೊಳ್ಳಲಾಗುವುದು ಎಂದಿದ್ದಾರೆ.

ಇನ್ನು ಸುವರ್ಣಸೌಧವನ್ನು ಬಾಡಿಗೆಗೆ ನೀಡುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವುದಾಗಿ ಮಹದೇವಪ್ಪ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com