ಗಡಿ ಜಿಲ್ಲೆಗಳಲ್ಲಿ ಉಗ್ರರ ತರಬೇತಿಗೆ ನೇಮಕಾತಿ: ಗುಪ್ತಚರ ಸಂಸ್ಥೆಗಳು

ಉಗ್ರಗಾಮಿ ಸಂಸ್ಥೆ ಹಿಜ್ಬ್-ಉಲ್-ಮುಜಾಹಿದ್ದೀನ್ ನೂತನವಾಗಿ ನೇಮಕಾತಿ ಮಾಡಿಕೊಂಡ ಜನರ ಗುಂಪಿನ ಫೋಟೋವನ್ನು ಸಾಮಾಜಿಕ ಅಂತರ್ಜಾಲದಲ್ಲಿ ಪ್ರಕಟಿಸಿದ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಉಗ್ರಗಾಮಿ ಸಂಸ್ಥೆ ಹಿಜ್ಬ್-ಉಲ್-ಮುಜಾಹಿದ್ದೀನ್ ನೂತನವಾಗಿ ನೇಮಕಾತಿ ಮಾಡಿಕೊಂಡ ಜನರ ಗುಂಪಿನ ಫೋಟೋವನ್ನು ಸಾಮಾಜಿಕ ಅಂತರ್ಜಾಲದಲ್ಲಿ ಪ್ರಕಟಿಸಿದ ಮೇಲೆ, ಕನಿಷ್ಠ ೧೪ ಲಷ್ಕರ್ ಎ ತೈಬಾ(ಎಲ್ ಇ ಟಿ) ಮತ್ತು ೫ ಜೈಶ್-ಎ-ಮೊಹಮ್ಮದ್ (ಜೆ ಎ ಎಂ) ಉಗ್ರಗಾಮಿಗಳು ಜಮ್ಮು ಕಾಶ್ಮೀರಕ್ಕೆ ನುಸುಳಿದ್ದು ಗಡಿ ಭಾಗದ ಗ್ರಾಮಗಳಲ್ಲಿ ಯುವಕರನ್ನು ಉಗ್ರಗಾಮಿ ತರಬೇತಿಗೆ ನೇಮಕ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

ಎಲ್ ಇ ಟಿ ಮುಜಪ್ಫರಾಬಾದ್, ಲಾಹೋರ್, ಪೇಶಾವರ್. ಇಸ್ಲಾಮಾಬಾದ್, ರಾವಲ್ಪಿಂಡಿ, ಕರಾಚಿ, ಮುಲ್ತಾನ್ ಮತ್ತು ಕ್ವೆಟ್ಟಾಗಳಲಿ ತರಬೇತಿ ಶಿಬಿರಗಳನ್ನು ಹೊಂದಿದೆ. ಜೆ ಎ ಎಂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರಗಾಮಿ ತರಬೇತಿ ಶಿಬಿರ ನಡೆಸುತ್ತದೆ. ಉನ್ನತ ಮೂಲಗಳ ಪ್ರಕಾರ ಪಾಕಿಸ್ತಾನದ ಉಗ್ರಗಾಮಿ ಗಾಜಿಲ್ ಜ ಎ ಎಂ ತಂಡವನ್ನು ಮುನ್ನಡೆಸುತ್ತಿದ್ದು ಅವಾಂತಿಪುರದಿಂದ ಅವನು ತನ್ನ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಗಡಿಯಲ್ಲಿ ಸಿಕ್ಕಿರುವ ಸುಳಿವಿನ ಪ್ರಕಾರ ಗಜಿಲ್ ನ ಆಪ್ತ ಹರೂನ್, ಪಾಕಿಸ್ತಾನಿ ನಿವಾಸಿ ಕೂಡ ಯುವಕರನ್ನು ಸೆಳೆಯಲು ಪ್ರತ್ನಿಸುತ್ತಿದ್ದಾನೆ ಎಂದು ತಿಳಿದುಬಂಡಿದೆ.

ಇವರ ಮಾತುಕತೆಯನ್ನು ಭೇಧಿಸಿರುವ ಗುಪ್ತಚರ ಇಲಾಖೆಗಳು "ಉಗ್ರಗಾಮಿಗಳು ಬೋಗುಂಡ್, ಬಾನ್ ಮತ್ತು ಖುಂಡ್ವಾನಿ ಪ್ರದೇಶಗಳಲ್ಲಿ ಚಲಿಸುತ್ತಿದ್ದಾರೆ. ಭದ್ರತಾ ಪಡೆಗಳನ್ನು  ರೆಡ್ ಅಲರ್ಟ್ ನಲ್ಲಿ ಇಡಲಾಗಿದೆ" ಎಂದು ಉನ್ನತ ಮೂಲಗಳು ತಿಳಿಸಿವೆ.

ಪಾಕಿಸ್ತಾನ, ಅಮೇರಿಕಾ, ಇಂಗ್ಲೆಂಡ್ ಮತ್ತು ಭಾರತದಲ್ಲಿ ಎಲ್ ಇ ಟಿ ಉಗ್ರಗಾಮಿ ಸಂಘಟನೆ ನಿಷೇಧಿತವಾಗಿದ್ದರೂ, ಜಮಾತ್ ಉದ ದಾವಾ ಎಂಬ ಹೆಸರಿನಲ್ಲಿ ಹಣ ಸಂಗ್ರಹಿಸಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಮುಂದಾಗಿದೆ. ಕಳೆದ ಒಂದು ವರ್ಷದಲ್ಲಿ ಭಾರತಕ್ಕೆ ಉಗ್ರಗಾಮಿಗಳು ನುಸುಳುತ್ತಿರುವುದು ಕಡಿಮೆಯಾಗಿದೆ ಎಂದು ಸರ್ಕಾರ ತಿಳಿಸಿದ್ದರು, ಭಯೋತ್ಪಾದಕರು ಆಗಾಗ್ಗೆ ಭಾರತದೊಳಕ್ಕೆ ನುಸುಳುತ್ತಿರುವುದು ಕಂಡುಬರುತ್ತಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com