ಮಾನವ ಹಕ್ಕುಗಳ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್
ಪ್ರಧಾನ ಸುದ್ದಿ
ತೀಸ್ತ ಸೆತಲ್ವಾಡ್ ಮತ್ತು ಪತಿಯ ವಿರುದ್ಧ ಸಿಬಿಐ ಪ್ರಕರಣ ದಾಖಲು
ಸರ್ಕಾರದ ಪರವಾನಗಿ ಇಲ್ಲದೆ ವಿದೇಶಿ ಹಣ ಸ್ವೀಕರಿಸಿರುವ ಆರೋಪದ ಮೇಲೆ ಮಾನವ ಹಕ್ಕುಗಳ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ಅವರ ವಿರುದ್ಧ ಸಿಬಿಐ ಪ್ರಕರಣ
ನವದೆಹಲಿ: ಸರ್ಕಾರದ ಪರವಾನಗಿ ಇಲ್ಲದೆ ವಿದೇಶಿ ಹಣ ಸ್ವೀಕರಿಸಿರುವ ಆರೋಪದ ಮೇಲೆ ಮಾನವ ಹಕ್ಕುಗಳ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಈ ಎಫ್ ಐ ಆರ್ ನಲ್ಲಿ ತೀಸ್ತಾ ಅವರ ಪತ್ನಿ ಜಾವೇದ್ ಆನಂದ್, ಉದ್ಯಮಿ ಗುಲಾಂ ಮೊಹಮ್ಮದ್ ಪೆಶಿಮ್ಯಾಂ ಮತ್ತು ಸಬ್ರಂಗ್ ಕಮ್ಯುನಿಕೇಶನ್ ಮತ್ತು ಪಬ್ಲಿಶಿಂಗ್ ಸಂಸ್ಥೆಯ ಹೆಸರನ್ನೂ ಸೇರಿಸಲಾಗಿದೆ.
ಸಿಬಿಐ ಸದ್ಯಕ್ಕೆ ಸಬ್ರಂಗ್ ನ ದಾಖಲೆಗಳು ಮತ್ತು ಬ್ಯಾಂಕ್ ಖಾತೆಯ ವ್ಯವಹಾರಗಳನ್ನು ತನಿಖೆ ಮಾಡುತ್ತಿದ್ದು ಮೂವರನ್ನೂ ಶೀಘ್ರದಲ್ಲೆ ಪ್ರಶ್ನಿಸಲಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಸುಪ್ರೀಮ್ ಕೋರ್ಟ್ ಗುಜರಾತ್ ಪೊಲೀಸರಿಗೆ ತೀಸ್ತಾ ಸೆತಲ್ವಾಡ್ ಮತ್ತು ಅವರ ಪತಿಯನ್ನು ಬಂಧಿಸದಂತೆ ಸೂಚನೆ ನೀಡಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ