ಇಸ್ರೋ ಬೇಹುಗಾರಿಕೆ ಪ್ರಕರಣ: ಸರ್ಕಾರ, ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್

ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ತಾವು ಭಾಗಿಯಾಗಿರುವುದಾಗಿ ಆಪಾದಿಸಿ ತಮ್ಮನ್ನು ಬಂಧಿಸಿ ಮತ್ತು ಉದ್ಯೋಗದಿಂದ ವಜಾ ಮಾಡಿ ಕ್ರಮ ಕೈಗೊಂಡಿದ್ದನ್ನು ಪ್ರಶ್ನಿಸಿ
ಮಾಜಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್
ಮಾಜಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್

ನವದೆಹಲಿ: ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ತಾವು ಭಾಗಿಯಾಗಿರುವುದಾಗಿ ಆಪಾದಿಸಿ ತಮ್ಮನ್ನು ಬಂಧಿಸಿ ಮತ್ತು ಉದ್ಯೋಗದಿಂದ ವಜಾ ಮಾಡಿ ಕ್ರಮ ಕೈಗೊಂಡಿದ್ದನ್ನು ಪ್ರಶ್ನಿಸಿ ಇದಕ್ಕೆ ಕಾರಣರಾದ ಪೊಲೀಸರ ವಿರುದ್ಧ ಕ್ರಿಮಿನಲ್ ಮತ್ತು ಶಿಸ್ತು ಕ್ರಮ ಜರುಗಿಸಬೇಕೆಂದು ಸುಪ್ರೀಮ್ ಕೋರ್ಟ್ ಗೆ ಮಾಜಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅರ್ಜಿ ಸಲ್ಲಿಸಿರುವ ಹಿನ್ನಲೆಯಲ್ಲಿ, ಕೋರ್ಟ್ ಮಾಜಿ ಕೇರಳದ ಮಾಜಿ ಡಿಜಿಪಿ ಸಿಬಿ ಮ್ಯಾಥ್ಯೂಸ್ ಮತ್ತು ಇನ್ನಿಬ್ಬರು ಪೊಲೀಸ್ ಅಧಿಕಾರಿಗಳಿಂದ ಸ್ಪಷ್ಟನೆ ಕೇಳಿದೆ.

ನಾರಾಯಣನ್ ಅವರನ್ನು ಸಿಬಿಐ ಅನಧಿಕೃತವಾಗಿ ಬಂಧಿಸಿದ್ದಕ್ಕೆ ಕಾರಣವಾಗಿದ್ದ ಮಾಜಿ ಡಿಜಿಪಿ ಸಿಬಿ ಮ್ಯಾಥ್ಯೂಸ್ ಹಾಗು ಮಾಜಿ ಪೊಲೀಸ್ ಆಯುಕ್ತರಾದ ಕೆ ಕೆ ಜೋಶ್ವಾ ಮತ್ತು ಎಸ್ ವಿಜಯನ್ ವಿರದ್ಧ ಕ್ರಮ ಕೈಗೊಳ್ಳುವ ಅವಶ್ಯಕತೆ ಇಲ್ಲ ಎಂಬ ಹೈಕೋರ್ಟ್ ತೀರ್ಪಿನ ವಿರುದ್ಧ ಕೂಡ ಅರ್ಜಿ ಸಲ್ಲಿಸಿದ್ದು ಇದಕ್ಕೆ ಪ್ರತಿಕ್ರಿಯಿಸುವಂತೆ ಕೇರಳ ಸರ್ಕಾರ ಮತ್ತು ಸಿಬಿಐಗೆ ಕೂಡ ಸುಪ್ರೀಮ್ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿ ಪ್ರಫುಲ್ಲ ಸಿ ಪಂಥ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ೮ ವಾರದೊಳಗೆ ಉತ್ತರಿಸುವಂತೆ ಹೇಳಿದೆ.

೭೪ ವರ್ಷದ ನಾರಾಯಣನ್, ಈಗ ಸದ್ಯಕ್ಕೆ ಕೇರಳದ ಪ್ರಧಾನ ಮಾಹಿತಿ ಆಯುಕ್ತ ಆಗಿರುವ ಮ್ಯಾಥ್ಯುಸ್ ಮತ್ತು ಇನ್ನಿಬ್ಬರು ಪೋಲಿಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮತ್ತು ಶಿಸ್ತು ಕ್ರಮ ಜರುಗಿಸುವಂತೆ ಕೋರ್ಟ್ ಮೊರೆ ಹೋಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com