
ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿರುವ ವ್ಯಾಪಂ ಹಗರಣದ ತನಿಖೆಗೆ ಸಿಬಿಐ ತಂಡ ಮಂಗಳವಾರ ಭೋಪಾಲ್ ಗೆ ತೆರಳಲಿದೆ ಎಂದು ತಿಳಿದುಬಂದಿದೆ.
ಈ ತನಿಖಾ ಏಜೆನ್ಸಿ ೪೦ ಅಧಿಕಾರಗಳ ತಂಡವನ್ನು ರಚಿಸಿದ್ದು, ಸಹ ನಿರ್ದೇಶಕ ಶ್ರೇಣಿಯ ಅಧಿಕಾರಿ ತಂಡವನ್ನು ಮುನ್ನಡೆಸಲಿದ್ದಾರೆ.
ವ್ಯಾಪಂ ಹಗರಣದ ಎಲ್ಲಾ ಪ್ರಕರಣಗಳನ್ನು, ಸುಪ್ರೀಂ ಕೋರ್ಟ್ ಕಳೆದ ವಾರ ಸಿಬಿಐಗೆ ವರ್ಗಾಯಿಸಿತ್ತು.
ರಾಜ್ಯದ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರ ವಜಾಕ್ಕಾಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ್ದ ಸುಪ್ರೀಂ ಕೋರ್ಟ್, ಮಧ್ಯ ಪ್ರದೇಶ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್ ನೀಡಿ ನಾಲ್ಕು ವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ.
Advertisement