ಅಮಾನವೀಯತೆಯ ರೌದ್ರನರ್ತನ: ಬಿಹಾರದಲ್ಲಿ ಮಹಾದಲಿತರಿಗೆ ಸಾಮಾಜಿಕ ಬಹಿಷ್ಕಾರ

ಪ್ರಭಾವಿ ಮನುಷ್ಯನ ಮನೆಯ ಸತ್ತ ಎತ್ತೊಂದನ್ನು ಎತ್ತಲು ನಿರಾಕರಿಸಿದ್ದಕ್ಕೆ ಬಿಹಾರದ ಹಳ್ಳಿಯಲ್ಲಿ ಕಡುಬಡವರಾದ ಮಹಾದಲಿತರು ಸಾಮಾಜಿಕ ಬಹಿಷ್ಕಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಟ್ನಾ: ಪ್ರಭಾವಿ ಮನುಷ್ಯನ ಮನೆಯ ಸತ್ತ ಎತ್ತೊಂದನ್ನು ಎತ್ತಲು ನಿರಾಕರಿಸಿದ್ದಕ್ಕೆ ಬಿಹಾರದ ಹಳ್ಳಿಯಲ್ಲಿ ಕಡುಬಡವರಾದ ಮಹಾದಲಿತರು ಸಾಮಾಜಿಕ ಬಹಿಷ್ಕಾರ ಎದುರಿಸುತ್ತಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಶೇಕ್ಪುರ ಜಿಲ್ಲೆಯ ಪಿಂಡ್ಶರಿಫ್ ಗ್ರಾಮದ ಸುಮಾರು ೧೨ ಮಹಾದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದು, ಪ್ರಾದೇಶಿಕ ಅಂಗಡಿಗಳಿಂದ ವಸ್ತುಗಳನ್ನು ಕೊಳ್ಳಲು ನಿರಾಕರಿಸಲಾಗಿದೆ ಹಾಗೆಯೇ ಅವರ ಮಕ್ಕಳನ್ನು ಶಾಲೆಯಿಂದ ಹೊರದಬ್ಬಲಾಗಿದೆ.

ಗ್ರಾಮದ ಪ್ರಭಾವಿ ವ್ಯಕ್ತಿ ಜಿತೇಂದ್ರ ಚೌಧರಿ ಆವರ ಮನೆಯಲ್ಲಿ ಸತ್ತು ಬಿದ್ದಿದ್ದ ಎತ್ತನ್ನು ಎತ್ತಿ ಹೊರಹಾಕಲು ಮಹಾದಲಿತ ಸಮುದಾಯದ ಸೀತಾರಮ್ ರವಿದಾಸ್ ನಿರಾಕರಿಸಿದಾಗ ಈ ತೊಂದರೆಯ ಸೃಷ್ಟಿ ಆಗಿದೆ.

"ಇದರಿಂದ ಕೆಲವು ಪ್ರಭಾವಿ ವ್ಯಕ್ತಿಗಳು ಆಕ್ರೋಶಕ್ಕೆ ಗುರಿಯಾಗಿದ್ದು ಅವರು ಪಂಚಾಯತಿ ಸಭೆ ಕರೆದಿದ್ದಾರೆ. ಆಗ ಸಭೆಯಲ್ಲಿ ಮಹಾದಲಿತರಿಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಬಹಿಷ್ಕಾರ ಹಾಕಲಾಗಿದೆ" ಎಂದು ಶೇಕ್ಪುರ ಪೊಲೀಸ್ ಮಹಾ ನಿರ್ದೇಶಕ ಧೀರಜ್ ಕುಮಾರ್ ತಿಳಿಸಿದ್ದಾರೆ.

"ಇದು ಗಂಬೀರ ವಿಷಯವಾಗಿರುವುದರಿಂದ ಆರೋಪಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದೇನೆ" ಎಂದು ಅವರು ತಿಳಿಸಿದ್ದಾರೆ.

ಮಹದಾಲಿತರ ಗುಂಪೊಂದು ಸೋಮವಾರ ಅವರ ಬಳಿಬಂದು ನ್ಯಾಯಕ್ಕಾಗಿ ಮೊರೆಯಿಟ್ಟಿದೆ. ಈ ಪ್ರಕರಣದಲ್ಲಿ ಶೀಘರವೇ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉಪ ವಿಭಾಗ ಪೋಲಿಸ್ ಅಧಿಕಾರಿಗೆ ಕುಮಾರ್ ಆದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com