
ನವದೆಹಲಿ: ೨೦೧೩ರ ಭೂಸ್ವಾಧೀನ ಸುಗ್ರೀವಾಜ್ಞೆ ಕಾಯ್ದೆಯಲ್ಲಿ, ಜಮೀನನ್ನು ಸ್ವಾಧೀನಪಡಿಸ್ಕೊಳ್ಳುವ ಕಾನೂನನ್ನು ಸಡಿಲಪಡಿಸಿ ತಿದ್ದುಪಡಿ ತಂದು ದ್ವಿತೀಯ ಬಾರಿಗೆ ಮರುಪ್ರಕಟನೆ ಹೊರಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಸಂಸತ್ ಅಧಿವೇಶನ ನಡೆಯುವಾಗ ಈ ಸುಘ್ರೀವಾಜ್ಞೆಯನ್ನು ಸರ್ಕಾರ ಹೊರಡಿಸಿದ್ದು ಇದು ಸಂವಿಧಾನಕ್ಕೆ ಕೇಂದ್ರ ಸರ್ಕಾರ ಎಸಗಿದ ಅಪಚಾರ ಎಂದು ಹಿರಿಯ ವಕೀಲ ಜೈಸಿಂಗ್ ಕೋರ್ಟ್ ಗೆ ತಿಳಿಸಿದ್ದರಿಂದ ನ್ಯಾಯಮೂರ್ತಿ ಜಗದೀಶ್ ಸಿಂಗ್ ಕೇಹಾರ್ ಮತ್ತು ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ಒಳಗೊಂಡ ಅಪೆಕ್ಸ್ ನ್ಯಾಯಾಲಯ ಪೀಠ ನೋಟಿಸ್ ಜಾರಿ ಮಾಡಿದೆ.
ಈ ಹಿಂದೆ ಈ ಭೂಸುಗ್ರೀವಾಜ್ಞೆ ಮತ್ತು ಅದರ ಮೊದಲ ಮರುಪ್ರಕಟಣೆಯ ವಿರುದ್ಧ ಪ್ರಶ್ನಿಸಿ ದೆಹಲಿ ಗ್ರಾಮೀಣ ಸಮಾಜ ಕೋರ್ಟ್ ಮೊರೆ ಹೋಗಿತ್ತು.
ಈ ಹಿಂದೆ ದೆಹಲಿ ಗ್ರಾಮೀಣ ಸಮಾಜ ಪ್ರಶ್ನಿಸಿದ್ದಾಗಲೂ ಎರಡು ಬಾರಿ ಸರ್ಕಾರಕ್ಕೆ ನೋಟಿಸ್ ನೀಡಿದ್ದರೂ, ಸರ್ಕಾರ ಉತ್ತರಿಸುವ ಗೋಜಿಗೆ ಹೋಗಿಲ್ಲ ಎಂದು ಕೋರ್ಟ್ ಗಮನಿಸಿದೆ.
Advertisement