ರಾಜ್ಯದಲ್ಲಿ ಮಳೆಯಬ್ಬರಕ್ಕೆ ನಾಲ್ವರು ಬಲಿ

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ಸುಭಾಷ್ ನಗರದ 7ನೇ ತರಗತಿ ವಿದ್ಯಾರ್ಥಿನಿ ಅನೀಶಾ(13) ಶಾಲೆ ಮುಗಿಸಿ ವಾಪಸಾಗುವಾಗ ಮನೆ ಸಮೀಪದ ಹಳ್ಳದಲ್ಲಿ ಜಾರಿ ಬಿದ್ದು ಮೃತಪಟ್ಟಿದ್ದಾಳೆ.

ಇನ್ನು ಸುಳ್ಳದ ತೇರಾಲು ಸಮೀಪದ ಕೊಡೆಂಚಿಕಾರು ಬಳಿಯ ಹೊಳೆ ಬದಿಯಲ್ಲಿ ಸುಮಾರು 35 ವರ್ಷದ ಮಹಿಳೆಯೊಬ್ಬರ ಮೃತ ದೇಹಪತ್ತೆಯಾಗಿದೆ.

ಮಳೆಯಿಂದಾಗಿ ಭಾನುವಾರ ರಾತ್ರಿ ಕಾರು ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ. ಈ ಸಂದರ್ಭದಲ್ಲಿ ಕಾರೊಳಗಿದ್ದ ಶಶಿಧರ ಶೆಟ್ಟಿ(35) ಸಾವನ್ನಪ್ಪಿದ್ದಾರೆ.

ಕುಂದಾಪುರ ತಾಲೂಕಿನ ಗಂಗೋಳ್ಳಿ ಗ್ರಾಮದ ಯೋಗೇಂದ್ರ ದೇವಾಡಿಗ ಮೀನು ಹಿಡಿಯಲು ಹೋಗಿ ಕೊಚ್ಚಿ ಹೋಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com