
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಅವರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಸೋಮವಾರ ಬಂಧಿಸಿದೆ.
ಬೆಂಗಳೂರು ಪಶ್ವಿಮ ವಲಯ ಡಿಸಿಪಿ ಲಾಬೂರಾಮ್ ನೇತೃತ್ವದ ಎಸ್‌ಐಟಿ ತಂಡ, ಇಂದು ಪ್ರಕರಣದ ಮೊದಲ ಆರೋಪಿ, ಅಶ್ವಿನ್ ರಾವ್ ಅವರನ್ನು ಮಹಾರಾಷ್ಟ್ರದ ಔರಂಗಬಾದ್‌ನಲ್ಲಿ ವಶಕ್ಕೆ ಪಡೆದಿದೆ.
ಪ್ರಕರಣ ಸಂಬಂಧ ಇದುವರೆಗೆ ಒಟ್ಟು ಆರು ಆರೋಪಿಗಳನ್ನು ಬಂಧಿಸಿರುವ ಎಸ್‌ಐಟಿ, ನಿನ್ನೆಯಷ್ಟೇ ಲೋಕಾಯುಕ್ತ ಜಂಟಿ ಆಯುಕ್ತ, ಸಾರ್ವಜನಿಕ ಸಂಪರ್ಕಾಧಿಕಾರಿ ಸೈಯದ್ ರಿಯಾಜ್ ಅವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದೆ.
ಮತ್ತೊಂದೆಡೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಬಿಡಿಎ ಬ್ರೋಕರ್ ವಾಸು, ವಿ.ಭಾಸ್ಕರ್ ಅಲಿಯಾಸ್ 420 ಭಾಸ್ಕರ್ ಗಾಗಿ ಎಸ್ಐಟಿ ತಂಡ ತೀವ್ರ ಶೋಧ ನಡೆಸಿದೆ.
Advertisement