ಕರ್ನಾಟಕದ ಮೇಲ್ಮನವಿ ನಾಚಿಕೆಗೇಡು: ಎಐಡಿಎಂಕೆ

ಮಿತಿಮೀರಿದ ಆಸ್ತಿ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಸುಪ್ರೀಮ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿರುವ
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ

ಚೆನ್ನೈ: ಮಿತಿಮೀರಿದ ಆಸ್ತಿ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಸುಪ್ರೀಮ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿರುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು "ನಾಚಿಕೆಗೇಡು" ಎಂದಿರುವ ಎಐಡಿಎಂಕೆ ಪಕ್ಷ, ಜಯಲಲಿತಾ ಈ ಬಾರಿಯೂ ತಮ್ಮ ಮುಗ್ಧತೆಯನ್ನು ಸಾಬೀತುಪಡಿಸಲಿದ್ದಾರೆ ಎಂದಿದೆ.

"೧೮ ವರ್ಷದ ಈ ಹಳೆಯ ಪ್ರಕರಣದಲ್ಲಿ ಎಲ್ಲ ವಾದ ವಿವಾದ ಮುಗಿದ ಮೇಲೆ ಹೈಕೋರ್ಟ್ ತೀರ್ಪು ನೀಡಿದ್ದರೂ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿರುವುದು ನಾಚಿಕೆಗೇಡಿನ ಕೆಲಸ" ಎಐಡಿಎಂಕೆ ತಮಿಳು ದಿನಪತ್ರಿಕೆ "ಡಾ. ನಮಧು ಎಂಜಿಆರ್" ಮುಖಪುಟದ ಲೇಖನದಲ್ಲಿ ಹೇಳಿದೆ.

ನೆನ್ನೆ ನಡೆದ ಸಂಪುಟ ಸಭೆಯ ನಂತರ ಜಯಲಲಿತಾ ನಿರಪರಾಧಿ ಎಂದು ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿತ್ತು.

"ತಮ್ಮ ವಿರುದ್ಧದ ಪಿತೂರಿಗಳನ್ನು ಬದಿಗೆ ನೂಕಿ ಮತ್ತೆ ನಿರಪರಾಧಿ ಎಂದು ಸಾಬೀತುಪಡಿಸಿ ಕುಲುಮೆಯಿಂದ ಹೊರಬರುವ ಅಪ್ಪಟ ಚಿನ್ನದಂತೆ ಪುರಚಿ ಥಲೈವಿ ಅಮ್ಮ ಕೊಡವಿ ಬರಲಿದ್ದಾರೆ ಎಂದು ತಮಿಳುನಾಡಿನ ಜನರಿಗೆ ನಂಬಿಕೆಯಿದೆ" ಎಂದು ಲೇಖನದಲ್ಲಿ ಬರೆಯಲಾಗಿದೆ.

ಈ ಲೇಖನದಲ್ಲಿ ಡಿಎಂಕೆ ಮತ್ತು ಪಿಎಂಕೆ ಪಕ್ಷಗಳನ್ನು ಕೂಡ ತರಾಟೆಗೆ ತೆಗೆದುಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com