ಬಾಂಗ್ಲಾ ಪರೀಕ್ಷೆಯಲ್ಲಿ ಮ್ಯಾಗಿ ಪಾಸ್
ಢಾಕಾ: ವಿಷಕಾರಿ ಅಂಶ ಪತ್ತೆಯಾಗುವುದರೊಂದಿಗೆ ಭಾರತದಲ್ಲಿ ತೀವ್ರ ವಿವಾದಕ್ಕೀಡಾಗಿರುವ ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ಬಾಂಗ್ಲಾ ದೇಶ ಸರ್ಕಾರ ನಡೆಸಿದ್ದ ಪರೀಕ್ಷೆಯಲ್ಲಿ ಪಾಸ್ ಆಗಿದೆ.
ನೆಸ್ಲೆಯ ಮ್ಯಾಗಿ ನೂಡಲ್ಸ್ ಸೇರಿದಂತೆ ಒಟ್ಟು ಐದು ಬ್ರಾಂಡ್‍ನ ನೂಡಲ್ಸ್ ಗಳನ್ನು ಬಾಂಗ್ಲಾದೇಶದ ಆರೋಗ್ಯ ಗುಣಮಟ್ಟ ಸಂಸ್ಥೆ ಪರೀಕ್ಷೆಗೊಳಪಡಿಸಿತ್ತು. ಆದರೆ ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ಸಂಸ್ಥೆಯ ಮ್ಯಾಗಿ ನೂಡಲ್ಸ್ ನಲ್ಲಿ ಆರೋಗ್ಯಕ್ಕೆ ಹಾನಿಯಾಗಬಲ್ಲ ಯಾವುದೇ ವಿಷಕಾರಿ ಅಂಶಪತ್ತೆಯಾಗಿಲ್ಲ. ಈ ನೂಡಲ್ಸ್ ಗಳಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಈ ನೂಡಲ್ಸ್ ನಲ್ಲಿರುವ ಅಂಶಗಳು ನಿಗದಿತ ಮಿತಿಯೊಳಗಿವೆ ಎಂದು ಬಾಂಗ್ಲಾದೇಶ ಸ್ಟ್ಯಾಂಡಡ್ರ್ಸ್ ಆ್ಯಂಡ್ ಟೆಸ್ಟಿಂಗ್ ಇನ್ಸ್ಟಿಟ್ಯೂಟ್‍ನ ಪ್ರಮಾಣಪತ್ರ ನೀಡಿದೆ.
ಮ್ಯಾಗಿ ಮೇಲೆ ಸ್ವಯಂ ಪ್ರೇರಿತ ನಿಷೇಧ ಹೇರಿದ ಬಿಗ್ ಬಜಾರ್ ಇನ್ನು ಅತ್ತ ದೆಹಲಿ ಸರ್ಕಾರದಿಂದ ಮ್ಯಾಗಿ ನೂಡಲ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಘೋಷಣೆ ಹೊರಬೀಳುತ್ತಿದ್ದಂತೆಯೇ ಇತ್ತ ದೇಶದ ಪ್ರಮುಖ ಶಾಪಿಂಗ್ ಮಾಲ್ ಬಿಗ್ ಬಜಾರ್ ಸ್ವಯಂ ಪ್ರೇರಿತವಾಗಿ ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ಮೇಲೆ ನಿಷೇಧ ಹೇರಿದೆ. ದೇಶದಲ್ಲಿರುವ ಎಲ್ಲ ಬಿಗ್ ಬಜಾರ್ ಮಾಲ್ ಗಳಲ್ಲಿ ಇನ್ನು ಮ್ಯಾಗಿ ನೂಡಲ್ಸ್ ದೊರೆಯುವುದಿಲ್ಲ ಎಂದು ಅದು ಹೇಳಿದೆ.
ಹರ್ಯಾಣದಲ್ಲಿ ರಾಜ್ಯಾದ್ಯಂತ ಸ್ಯಾಂಪಲ್ ಸಂಗ್ರಹ
ಹರ್ಯಾಣ ಸರ್ಕಾರವು ರಾಜ್ಯಾದ್ಯಂತ ಮ್ಯಾಗಿ ನೂಡಲ್ಸ್ ಸ್ಯಾಂಪಲ್‍ಗಳನ್ನು ಸಂಗ್ರಹಿಸಲು ಆರೋಗ್ಯ ಇಲಾಖೆಗೆ ಮಂಗಳವಾರ ಆದೇಶಿಸಿದೆ. ಜಿಲ್ಲೆಗಳಿಂದ ಸಂಗ್ರಹಿಸಲಾಗುವ ಈ ಸ್ಯಾಂಪಲ್‍ಗಳನ್ನು ರಾಜ್ಯದ ಆಹಾರ ಗುಣಮಟ್ಟ ನಿಯಂತ್ರಣ ಲ್ಯಾಬೊರೇಟರಿಯಲ್ಲಿ ಪರೀಕ್ಷೆಗೊಳಪಡಿಸಲಾಗುವುದು ಎಂದು ಆರೋಗ್ಯ ಸಚಿವ ಅನಿಲ್ ವಿಜ್ ಮಾಹಿತಿ ನೀಡಿದ್ದಾರೆ.
2 ದಿನದಲ್ಲಿ ಫಲಿತಾಂಶ
ಕೇಂದ್ರ ಸರ್ಕಾರ ಕೂಡ ಎಲ್ಲ ರಾಜ್ಯಗಳಿಂದಲೂ ಮ್ಯಾಗಿ ನೂಡಲ್ಸ್ ನ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದೆ. ಆ ಕುರಿತ ವರದಿ ಇನ್ನೆರಡು ದಿನಗಳಲ್ಲಿ ಹೊರಬರುವ ಸಾಧ್ಯತೆ ಇದೆ.