ಎಡ್ವರ್ಡ್ ಸ್ನೋಡೆನ್ ಗೆ ನಾರ್ವೆ ದೇಶದ 'ಅಭಿವ್ಯಕ್ತಿ ಸ್ವಾತಂತ್ರ್ಯ' ಪ್ರಶಸ್ತಿ

ಅಮೆರಿಕಾದ ಬೇಹುಗಾರಿಕ ಸಂಸ್ಥೆಯ ಮಾಜಿ ಅಧಿಕಾರಿ ಎಡ್ವರ್ಡ್ ಸ್ನೋಡೆನ್ ಅವರಿಗೆ ನಾರ್ವೆ ದೇಶ ನೀಡುವ 'ಅಭಿವ್ಯಕ್ತಿ ಸ್ವಾತಂತ್ರ್ಯ' ಪ್ರಶಸ್ತಿ ಲಭಿಸಿದ್ದು
ಎಡ್ವರ್ಡ್ ಸ್ನೋಡೆನ್
ಎಡ್ವರ್ಡ್ ಸ್ನೋಡೆನ್

ಓಸ್ಲೋ: ಅಮೆರಿಕಾದ ಬೇಹುಗಾರಿಕ ಸಂಸ್ಥೆಯ ಮಾಜಿ ಅಧಿಕಾರಿ ಎಡ್ವರ್ಡ್ ಸ್ನೋಡೆನ್ ಅವರಿಗೆ ನಾರ್ವೆ ದೇಶ ನೀಡುವ 'ಅಭಿವ್ಯಕ್ತಿ ಸ್ವಾತಂತ್ರ್ಯ' ಪ್ರಶಸ್ತಿ ಲಭಿಸಿದ್ದು ಅಜ್ಞಾತವಾಸ ತೊರೆದು ಪ್ರಶಸ್ತಿ ತೆಗೆದುಕೊಳ್ಳಲು ಬರುವಂತೆ ಮಂಗಳವಾರ ನಾರ್ವೆ ಸ್ನೋಡೆನ್ ಅವರಿಗೆ ಆಹ್ವಾನ ನೀಡಿದೆ.

"ಖಾಸಗಿತನವನ್ನು ರಕ್ಷಿಸಿ ಅಮೇರಿಕಾ ತನ್ನ ನಾಗರಿಕರು ಮತ್ತು ಇತರರ ಮೇಲೆ ನಡೆಸುವ ಬೇಹುಗಾರಿಕೆಯನ್ನು ಬಯಲಿಗೆಳೆದಿದ್ದಕ್ಕೆ" ನಾರ್ವೆ ದೇಶದ ನೊಬೆಲ್ ಪ್ರಶಸ್ತಿ ವಿಜೇತನ ಹೆಸರಲ್ಲಿ ನೀಡುವ ಬಾರ್ನ್ಸನ್ ಪ್ರಶಸ್ತಿಯನ್ನು ೩೧ ವರ್ಷದ ಅಜ್ಞಾತವಾಸಿ ಸ್ನೋಡೆನ್ ಅವರಿಗೆ ಲಭಿಸಿದೆ ಎಂದು ನಾರ್ವೆ ಸಾಹಿತ್ಯ ಅಕಾಡೆಮಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಸಂಸ್ಥೆ ತಿಳಿಸಿದೆ.

ಅಮೇರಿಕ ರಾಷ್ಟೀಯ ಭದ್ರತಾ ಸಂಸ್ಥೆಯ ಜೊತೆ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದ ಸ್ನೋಡೆನ್ ಅಮೇರಿಕಾ ಮತ್ತು ಜಂಟಿ ರಾಷ್ಟ್ರಗಳು ನಡೆಸುವ ಬೇಹುಗಾರಿಕೆಯನ್ನು ಬಯಲಿಗೆಳೆದು ೨೦೧೩ ರಿಂದ ರಾಷ್ಯಾದಲ್ಲಿ ಅಜ್ಞಾತವಾಸದಲ್ಲಿದ್ದಾರೆ.

ಅಮೇರಿಕಾ ರಾಷ್ಟ್ರ ಸ್ನೋಡೆನ್ ಅವರನ್ನ್ನು ಹ್ಯಾಕರ್ ಮತ್ತು ದೇಶದ್ರೋಹ ಎಂದು ಕರೆದು ಅವರ ಮೇಲೆ ಕೇಸುಗಳನ್ನು ದಾಖಲು ಮಾಡಿದೆ.

ಸ್ನೋಡೆನ್ ಅವರು ಪ್ರಶಸ್ತಿ ನವೀಕರಿಸಲು ನಾರ್ವೆಗೆ ಬಂದರೆ ಅವರನ್ನು ಅಮೆರಿಕಾಕ್ಕೆ ಗಡಿಪಾರು ಮಾಡದಂತೆ ಭರವಸೆ ನಿಡಲು ಸಾಹಿತ್ಯ ಅಕಾಡೆಮಿ ನಾರ್ವೆ ಸರ್ಕಾರಕ್ಕೆ ಮನವಿ ಮಾಡಿದೆ. ಸೆಪ್ಟಂಬರ್ ೫ ರಂದು ಪ್ರಧಾನ ಮಾಡಲಿರುವ ಈ ಪ್ರಶಸ್ತಿಯ ಮೊತ್ತ ೧೧೫೦೦ಯೂರೋಗಳು.

ಈ ವಿಷಯ ವಲಸೆ ಅಧಿಕಾರಿಗಳಿಗೆ ಬಿಟ್ಟಿದ್ದು ಎಂದು ನಾರ್ವೆಯ ಕಾನೂನು ಸಚಿವಾಲಯ ತಿಳಿಸಿದೆ. ಈ ಹಿಂದೆ ಸ್ವೀಡನ್ ರಾಷ್ಟ್ರ ಕೂಡ ಸ್ನೋಡೆನ್ ಅವರಿಗೆ ಪ್ರಶಸ್ತಿ ಘೋಷಿಸಿದ್ದಾಗ ಅವರು ಅಲ್ಲಿಗೆ ತೆರಳದೆ ವಿಡಿಯೋ ಸಮಾವೇಶದ ಮೂಲಕ ಪ್ರಶಸ್ತಿ ಸ್ವೀಕರಿಸಿದ್ದರು.

ನೊಬೆಲ್ ಶಾಂತಿ ಪುರಸ್ಕಾರಕ್ಕೂ ಸ್ನೋಡೆನ್ ಅವರು ಸತತ ಎರಡನೆ ಬಾರಿಗೆ ನಾಮಾಂಕಿತವಾಗಿದ್ದು ಅಕ್ಟೋಬರ್ ೯ರಂದು ಓಸ್ಲೋದಲ್ಲಿಯೇ ಪ್ರಸ್ತಸ್ತಿ ಪ್ರಧಾನವಾಗಲಿದೆ.  


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com