
ಜಮ್ಮು: ಜಮ್ಮುವಿನಲ್ಲಿ ನಡೆದ ಸಿಖ್ ಸಮುದಾಯ ಮತ್ತು ಪೊಲೀಸರ ನಡುವಿನ ಹಿಂಸಾತ್ಮಕ ಘರ್ಷಣೆಯ ಹಿನ್ನಲೆಯಲ್ಲಿ ನಗರದಲ್ಲಿ ಸೆಕ್ಷನ್ ೧೪೪ ಜಾರಿ ಮಾಡಿದ್ದು ನಾಲ್ಕು ಜನ್ನಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
"ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆ ಇಡೀ ಜಿಲ್ಲೆಯಲ್ಲಿ ಸೆಕ್ಷನ್ ೧೪೪ ಜಾರಿ ಮಾಡಿದ್ದೇವೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಸೇನೆ ಜಾಗರೂಗವಾಗಿದೆ" ಎಂದು ಹೆಚ್ಚುವರಿ ಉಪ ಮಹಾ ನಿರ್ದೇಶಕ ರಿಫಾತ್ ಕೊಹ್ಲಿ ತಿಳಿಸಿದ್ದಾರೆ.
"ಸೆಕ್ಷನ್ ೧೪೪ ಜಾರಿಯಾಗಿದ್ದು ನಾಲ್ಕು ಜನಕ್ಕಿಂತಲೂ ಹೆಚ್ಚು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ" ಎಂದು ಅವರು ತಿಳಿಸಿದ್ದಾರೆ.
ಜಮ್ಮುವಿನ ಸತ್ವಾರಿ ಪ್ರದೇಶದಲ್ಲಿ ಸಿಖ್ ಸಮುದಾಯದ ಸದಸ್ಯರು ಪೊಲೀಸರೊಂದಿಗೆ ನಡೆಸಿದ ಘರ್ಷಣೆಯಲ್ಲಿ ಗುರುವಾರ ಕನಿಷ್ಠ ಒಬ್ಬ ನಾಗರಿಕ ಮೃತಪಟ್ಟಿದ್ದು ಕೆಲವು ಪೋಲಿಸರನ್ನು ಒಳಗೊಂಡಂತೆ ೨೫ ಜನಕ್ಕೂ ಹೆಚ್ಚು ಗಾಯಗೊಂಡಿದ್ದಾರೆ.
ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ ಅವರ ಜಾಹಿರಾತು ಫಲಕವನ್ನು ತೆಗೆದುಹಾಕಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದ ಸಮಯದಲ್ಲಿ ಈ ಘರ್ಷಣೆ ನಡೆದು ಹಿಂಸೆಯ ರೂಪ ತಾಳಿದೆ ಎಂದು ಮೂಲಗಳು ತಿಳಿಸಿವೆ.
Advertisement