ಬಾಂಗ್ಲಾ ಪ್ರವಾಸ: ಪ್ರಧಾನಿ ಮೋದಿ ವಿರುದ್ಧ ಪಾಕ್ ಖಂಡನಾ ನಿರ್ಣಯ

ಇತ್ತೀಚೆಗಷ್ಟೇ ಬಾಂಗ್ಲಾದೇಶ ಪ್ರವಾಸ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪಾಕಿಸ್ತಾನ ಸಂಸತ್ತು ಖಂಡನಾ ನಿರ್ಣಯ ಅಂಗೀಕಾರ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ಶೇಖ್ ಹಸೀನಾ
ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ಶೇಖ್ ಹಸೀನಾ

ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಬಾಂಗ್ಲಾದೇಶ ಪ್ರವಾಸ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪಾಕಿಸ್ತಾನ ಸಂಸತ್ತು ಖಂಡನಾ ನಿರ್ಣಯ ಅಂಗೀಕಾರ ಮಾಡಿದೆ.

ಪ್ರವಾಸದ ವೇಳೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶವನ್ನು ಸ್ವತಂತ್ರ್ಯಗೊಳಿಸುವ ವಿಚಾರದಲ್ಲಿ ಭಾರತ ಸರ್ಕಾರ ತೋರಿದ ದಿಟ್ಟ ಹೆಜ್ಜೆ ಗುರಿತು ಮಾತನಾಡಿದ್ದರು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪಾಕಿಸ್ತಾನ ಜನಪ್ರತಿನಿಧಿಗಳು ಕಣ್ಣು ಕೆಂಪಗಾಗಿಸಿಕೊಂಡಿದ್ದು, ಭಾರತ ಪ್ರಧಾನಿ ವಿರುದ್ದ ಪಾಕ್ ಸಂಸತ್ ನಲ್ಲಿ ಖಂಡನಾ ನಿರ್ಣಯವನ್ನು ಅಂಗೀಕರಿಸಿದ್ದಾರೆ.

ಇಸ್ಲಾಮಾಬಾದಿನಲ್ಲಿ ಇಂದು ಸಂಸತ್ ಕಲಾಪದಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಖಂಡನಾ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಪಾಕಿಸ್ತಾನದ ಈ ಖಂಡನಾ ನಿರ್ಣಯದಲ್ಲಿ ಭಾರತ ಅಧಿಪತ್ಯ ನಡೆಸುವ ಮನೋಭಾವವನ್ನು ಹೊಂದಿದೆ ಎಂದು ಟೀಕಿಸಲಾಗಿದ್ದು, ಭಾರತದ ಈ ಮನೋಭಾವವನ್ನು ನಾವು ವಿರೋಧಿಸುತ್ತೇವೆ. ಅಲ್ಲದೆ ನಮ್ಮ ಗಡಿಯಲ್ಲಿ ಯಾವುದೇ ಕಾರಣಕ್ಕೂ ಭಾರತದ ಮಿಲಿಟರಿ ಪಡೆಗಳು ಕಾಲಿಡಲು ಬಿಡುವುದಿಲ್ಲ ಎಂಬಿತ್ಯಾದಿ ಅಂಶಗಳನ್ನು ಅಂಗೀಕರಿಸಲಾಗಿದೆ.

ಇನ್ನು ಭಾರತೀಯ ಮಾಧ್ಯಮಗಳು ವಿಶ್ಲೇಸಿರುವಂತೆ ಮಯನ್ಮಾರ್ ಗಡಿಯಲ್ಲಿ ಭಯೋತ್ಪಾದಕರ ವಿರುದ್ಧ ಭಾರತ ನಡೆಸಿದ ಮಿಲಿಟರಿ ಕಾರ್ಯಾಚರಣೆ ಪಾಕ್ ನಿದ್ದೆಗೆಡಿಸಿದ್ದು, ಇದೇ ಕಾರಣಕ್ಕಾಗಿ ಪಾಕಿಸ್ತಾನ ಸಂಸತ್ತು ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಖಂಡನಾ ನಿರ್ಣಯವನ್ನು ಅಂಗೀಕರಿಸಿದೆ ಎಂದು ಹೇಳಲಾಗುತ್ತಿದೆ.

ಈಶಾನ್ಯ ಭಾರತದಲ್ಲಿ ಅಟ್ಟಹಾಸ ಮೆರೆದು 20 ಮಂದಿ ಯೋಧರ ಸಾವಿಗೆ ಕಾರಣರಾಗಿದ್ದ ನಾಗಾ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಮಯನ್ಮಾರ್ ಗಡಿಯಲ್ಲಿ ಭಾರತೀಯ ಸೇನೆ ಆಪರೇಷನ್ ಭಾರತೀ ಎಂಬ ಹೆಸರಿನಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿತ್ತು. ಕಾರ್ಯಾಚರಣೆಯಲ್ಲಿ ಭಾರತೀಯ ಸೈನಿಕರು ಸುಮಾರು 100 ಅಧಿಕ ಭಯೋತ್ಪಾದಕರನ್ನು ಕೊಲ್ಲುವಲ್ಲಿ ಯಶಸ್ವಿಯೂ ಆಗಿತ್ತು. ಈ ಪ್ರಕರಣ ಇದೀಗ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ್ದು, ಮಯನ್ಮಾರ್ ನಂತೆಯೇ ಭಾರತೀಯ ಸೇನೆ ತಮ್ಮ ಗಡಿಯೊಳಗೂ ನುಗ್ಗಬಹುದು ಎಂಬ ಭಯ ಆದೇಶಕ್ಕ ಕಾಡುತ್ತಿದ್ದು, ಇದೇ ಕಾರಣಕ್ಕಾಗಿ ಈ ಖಂಡನಾ ನಿರ್ಣಯವನ್ನು ಅಂಗೀಕರಿಸಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com