ಮಂಗಳೂರಿನಲ್ಲಿ ಭಯಾನಕ ಅಂಟು ರೋಗ ಪತ್ತೆ
ಮಂಗಳೂರು: ಮಂಗಳೂರಿನಲ್ಲಿ 'ಎಂಆರ್‌ಎಸ್‌ಎ'(Methicillin-resistant Staphylococcus aureus ) ಎಂಬ ಭಯಾನಕ ಅಂಟುರೋಗ ಪತ್ತೆಯಾಗಿದೆ.
ಬ್ಯಾಕ್ಟಿರಿಯಾದಿಂದ ಗಾಳಿಯ ಮೂಲಕ ಹರಡುವ 'ಎಂಆರ್‌ಎಸ್‌ಎ' ಕಾಯಿಲೆ ಮಂಗಳೂರಿನ ಬಲ್ಮಠದಲ್ಲಿರುವ ಲಕ್ಷ್ಮಿ ಮೆಮೋರಿಯಲ್ ನರ್ಸಿಂಗ್ ಕಾಲೇಜ್‌ನ 120 ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿದೆ.
ಸಾಮಾನ್ಯವಾಗಿ ಯೂರೋಪಿಯನ್ ರಾಷ್ಟ್ರಗಳಲ್ಲಿ ಕಂಡುಬರುವ ಈ ಭಯಾನಕ ಕಾಯಿಲೆ ಈಗ ಮಂಗಳೂರಿನಲ್ಲಿ ಪತ್ತೆಯಾಗಿದೆ.
ರೋಗ ಪತ್ತೆಯಾಗಿದ್ದು ಗೊತ್ತಿದ್ದರೂ ಕಾಲೇಜು ಆಡಳಿತ ಮಂಡಳಿ ಅದನ್ನು ಮುಚ್ಚಿಟ್ಟಿದೆ ಎಂದು ಆರೋಪಿಸಿ ಆಡಳಿತ ಮಂಡಳಿಯ ವಿರುದ್ಧ ಇಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಆಡಳಿತ ಮಂಡಳಿಯ ನಿರ್ಲಕ್ಷ್ಯ ಖಂಡಿಸಿ ನೂರಾರು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿ ಪ್ರತಿಭಟನೆ ನಡೆಸುತ್ತಿದ್ದು, ರೋಗ ಪತ್ತೆಯಾದವರನ್ನು ಪ್ರತ್ಯೇಕಿಸುವುದಾಗಲಿ ಅಥವಾ ಅವರಿಗೆ ರಜೆ ನೀಡದೇ ಆಡಳಿತ ವಿದ್ಯಾರ್ಥಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಸೋಂಕು ತಗುಲಿದ ವ್ಯಕ್ತಿಯಲ್ಲಿ ಚರ್ಮದ ಸಮಸ್ಯೆಗಳು ಸೇರಿ ಹಲವು ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಪ್ರಾಥಮಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ರೋಗಿ ಸಾವನ್ನಪ್ಪುವ ಸಾಧ್ಯತೆ ಇದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ