ಉತ್ತರಪ್ರದೇಶದಲ್ಲಿ ಐ ಎ ಎಫ್ ಯುದ್ಧ ವಿಮಾನ ಪತನ

ಭಾರತೀಯ ವೈಮಾನಿಕ ದಳಕ್ಕೆ ಸೇರಿದ ಜಾಗ್ವಾರ್ ಯುದ್ಧ ವಿಮಾನವೊಂದು, ಉತ್ತರಪ್ರದೇಶದ ಅಲಹಾಬಾದ್ ನಲ್ಲಿ ಮಂಗಳವಾರ ಪತನಗೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಕನೌ: ಭಾರತೀಯ ವೈಮಾನಿಕ ದಳಕ್ಕೆ ಸೇರಿದ ಜಾಗ್ವಾರ್ ಯುದ್ಧ ವಿಮಾನವೊಂದು, ಉತ್ತರಪ್ರದೇಶದ ಅಲಹಾಬಾದ್ ನಲ್ಲಿ ಮಂಗಳವಾರ ಪತನಗೊಂಡಿದೆ. ದಿನನಿತ್ಯದ ಹಾರಾಟವನ್ನು ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ ವಿಮಾನ ಕೆಳಕ್ಕೆ ಉರುಳಿದೆ. ಇಬ್ಬರೂ ವಿಮಾನಚಾಲಕರು ಸುರಕ್ಷಿತವಾಗಿದ್ದಾರೆ.

ಬಮ್ರೌಲಿ ವಿಮಾನ ಅಡ್ಡೆಯಿಂದ ಹಾರಿದ ಕೆಲವೇ ಕ್ಷಣಗಳ ನಂತರ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದಾಗಿ ಚಾಲಕರು ಸಂದೇಶ ಕಳುಹಿಸಿದ್ದಾರೆ. ವಿಮಾನ ನಿಯಂತ್ರಣ ತಪ್ಪಿದ ನಂತರ ವಿಮಾನದಿಂದ ಚಾಲಕರು ಹೊರಬಂದಿದ್ದಾರೆ. ನಂತರ ನೈನಾ ಪ್ರದೇಶದ ಭಾರತೀಯ ಆಹಾರ ಸಂಸ್ಥೆಯ ಬಳಿ ವಿಮಾ ಪತನಗೊಂಡಿದೆ.

ಇಬ್ಬರೂ ಪೈಲಟ್ ಗಳು ಸುರಕ್ಷಿತವಾಗಿದ್ದು ವಿಮಾನ ನಾಶವಾಗಿದೆ.

ಯುದ್ಧ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು ಅಗ್ನಿಶಾಮಕ ದಳ ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ಈ ಪ್ರದೇಶಕ್ಕೆ ಪ್ರವೇಶವನ್ನು ನಿಷೇಧಿಸಲಾಗಿದ್ದು, ಪತನದಿಂದಾಗಿ ಯಾವುದೇ ಸಾವು ನೋವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com