
ನವದೆಹಲಿ: ದೆಹಲಿ ಮಾಜಿ ಕಾನೂನು ಮಂತ್ರಿ ಜಿತೇಂದ್ರ ಸಿಂಗ್ ತೋಮರ್ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ಸೋಮವಾರ ವಜಾ ಮಾಡಿದೆ. ನಕಲಿ ಪದವಿ ಪ್ರಮಾಣಪತ್ರ ಸೃಷ್ಟಿಸಿದ ಮತ್ತು ಸಲ್ಲಿಸಿದ ಆರೋಪವನ್ನು ತೋಮರ್ ಎದುರಿಸುತ್ತಿದ್ದಾರೆ.
ಜಾಮೀನು ಮನವಿಯನ್ನು ತಿರಸ್ಕರಿಸಿದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮೆಜಿಸ್ಟ್ರೆಟ್ ತರುಣ್ ಯೋಗೇಶ್, ತೋಮರ್ ಅವರ ನ್ಯಾಯಾಂಗ ಬಂಧನವನ್ನು ಜುಲೈ ೬ ವರೆಗೆ ವಿಸ್ತರಿಸಿದ್ದಾರೆ.
ನಕಲು, ವಂಚನೆ ಮತ್ತು ಅಪರಾಧಿ ಪಿತೂರಿ ಆರೋಪಗಳನ್ನು ಹೇರಿ ತೋಮರ್ ಅವರನ್ನು ದೆಹಲಿ ಪೊಲೀಸರು ಜೂನ್ ೯ ರಂದು ಬಂಧಿಸಿದ್ದರು.
Advertisement