ಲೋಕಾ ಕಚೇರಿಯಲ್ಲಿ ಲಂಚ ವರದಿಗೆ ನ್ಯಾ. ಅಡಿ ಆದೇಶ

ಲೋಕಾಯುಕ್ತ ಕಚೇರಿ ಅಧಿಕಾರಿ ಹೆಸರು ಹೇಳಿಕೊಂಡು ಕಾರ್ಯ ನಿರ್ವಾಹಕ ಎಂಜಿನಿಯರ್ ಒಬ್ಬರಿಂದ ರು.1 ಕೋಟಿ ಹಣಕ್ಕೆ ಬೆದರಿಕೆ ಹಾಕಿರುವ ಪ್ರಕರಣ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಲೋಕಾಯುಕ್ತ ಕಚೇರಿ ಅಧಿಕಾರಿ ಹೆಸರು ಹೇಳಿಕೊಂಡು ಕಾರ್ಯ ನಿರ್ವಾಹಕ
ಎಂಜಿನಿಯರ್ ಒಬ್ಬರಿಂದ ರು.1 ಕೋಟಿ ಹಣಕ್ಕೆ ಬೆದರಿಕೆ ಹಾಕಿರುವ ಪ್ರಕರಣ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಸ್ಪಿ ಸೋನಿಯಾ ನಾರಂಗ್ ಅವರಿಗೆ ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ನಿರ್ದೇಶನ ನೀಡಿದ್ದಾರೆ.

ಲೋಕೋಪಯೋಗಿ ಇಲಾಖೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಎಂಜಿನಿಯರ್
ಕೃಷ್ಣಮೂರ್ತಿ ಎಂಬುವರಿಗೆ ಕರೆ ಮಾಡಿದ ವ್ಯಕ್ತಿಯೋಬ್ಬ, ತಾನು ಕೃಷ್ಣರಾವ್ ಎಂದು ಪರಿಚಯಿಸಿಕೊಂಡು `ಭ್ರಷ್ಟಾಚಾರದಲ್ಲಿ ತೊಡಗಿರುವ ನಿಮ್ಮ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಲಾಗುತ್ತದೆ. ದಾಳಿ ಮಾಡದಿರಲು ರು.1 ಕೋಟಿ ಲಂಚ ನೀಡಬೇಕು' ಎಂದು ಬೆದರಿಕೆ ಹಾಕಿದ್ದರು.

ಈ ಸಂಬಂಧ ಕೃಷ್ಣಮೂರ್ತಿ ಅವರು ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರನ್ನು ಭೇಟಿ ಮಾಡಿ ತಮಗೆ ಬರುತ್ತಿರುವ ಬೆದರಿಕೆ ಕರೆ ಬಗ್ಗೆ ದೂರು ನೀಡಿದ್ದರು. ಅಲ್ಲದೇ, ಬೆದರಿಕೆ ಹಾಕುತ್ತಿರುವ ವ್ಯಕ್ತಿ ನಿಮ್ಮ ಹೆಸರು (ಸೋನಿಯಾ ನಾರಂಗ್) ಹೇಳುತ್ತಿದ್ದಾನೆ ಎಂದು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ರಿಜಿಸ್ಟ್ರಾರ್ ಗೆ ಪತ್ರ ಬರೆದ ಎಸ್ಪಿ ಸೋನಿಯಾ ನಾರಂಗ್, `ತಮ್ಮ ಹೆಸರು ಹೇಳಿಕೊಂಡು ಅಧಿಕಾರಿ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿರುವ ವ್ಯಕ್ತಿಗಳ ಬಗ್ಗೆ ತನಿಖೆಯಾಗಬೇಕೆಂದು' ಮನವಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com