ಇರಾನಿ ವಿರುದ್ಧ ಪ್ರತಿಭಟನೆ; ಎಎಪಿ ಕಾರ್ಯಕರ್ತರ ಬಂಧನ
ನವದೆಹಲಿ: ವಿವಾದಾತ್ಮಕ ಶೈಕ್ಷಣಿಕ ಅರ್ಹತೆಯ ಆರೋಪ ಎದುರಿಸುತ್ತಿರುವ ಕೇಂದ್ರ ಮಾನವ ಸಂಪನ್ಮೂಲಗಳ ಖಾತೆ ಸಚಿವೆ ಸ್ಮೃತಿ ಇರಾನಿ ವಿರುದ್ಧ ಗುರುವಾರ ಸುಮಾರು ೫೦೦ ಕ್ಕೂ ಹೆಚ್ಚು ಎಎಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಸುಮಾರು ೬೭ ಕಾರ್ಯಕರ್ತರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಸಚಿವೆಯ ಮನೆಯ ಹೊರಗೆ ಪ್ರತಿಭಟನೆ ನಡೆಸಿದ್ದಕ್ಕೆ ೬೭ ಜನರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಮಹಾನಿರ್ದೇಶಕ ಜತಿನ್ ನಾರ್ವಾಲ್ ತಿಳಿಸಿದ್ದಾರೆ.
ನಕಲಿ ಪದವಿ ಪ್ರಮಾಣ ಪತ್ರದ ಆರೋಪದ ಮೇಲೆ ದೆಹಲಿ ಕಾನೂನು ಸಚಿವ ಜಿತೇಂದರ್ ಸಿಂಗ್ ತೋಮರ್ ಅವರನ್ನು ಬಂಧಿಸಿದಂತೆ, ಸ್ಮೃತಿ ಇರಾನಿ ಅವರನ್ನೂ ಕೂಡಲೆ ಬಂಧಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸಿತ್ತು.
"ಅವರನ್ನು ಹೆಚ್ಚು ತಡ ಮಾಡದೆ ಬಂಧಿಸಬೇಕು ಮತ್ತು ಅವರು ಸಚಿವ ಸ್ಥಾನದಿಂದ ರಾಜೀನಾಮೆ ನಿಡಬೇಕು" ಎಮು ಎಎಪಿ ವಕ್ತಾರ್ ಆಗ್ರಹಿಸಿದ್ದಾರೆ.
ವಿರೋಧ ಪಕ್ಷದ ಪ್ರತಿಭಟನೆಗೆ ಎಚ್ಚರಿಕೆಯಾಗಿ ಭದ್ರತಾ ಪಡೆಗಳು ಸಚಿವೆಯ ಗೃಹದ ಹೊರಗೆ ತಡೆಗೋಡೆಗಳನ್ನು ನಿರ್ಮಿಸಿದ್ದರು.
ಉತ್ತರಪ್ರದೇಶದ ಅಮೇಥಿಯಿಂದ ಸ್ಪರ್ಧಿಸಿ ಸೋತಿದ್ದ ಸ್ಮೃತಿ ಇರಾನಿ ಅವರ ವಿರುದ್ಧ ದೂರನ್ನು ಗಣನೆಗೆ ತೆಗೆದುಕೊಂಡಿರುವ ದೆಹಲಿ ಕೋರ್ಟ್ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸುವಂತೆ ದೂರುದಾರನಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ