ಸಚಿವರ ಕಾರ್ಖಾನೆ ಗೋದಾಮಿಗೆ ಬೀಗ

ಕಬ್ಬು ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಸಚಿವರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಪಾಟೀಲ್ ಒಡೆತನದ ಕಾರ್ಖಾನೆಗಳು...
ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಆರ್. ಪಾಟೀಲ್
ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಆರ್. ಪಾಟೀಲ್

ಬಾಗಲಕೋಟೆ: ಕಬ್ಬು ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಸಚಿವರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಆರ್. ಪಾಟೀಲ್ ಒಡೆತನದ ಕಾರ್ಖಾನೆಗಳು ಸೇರಿದಂತೆ ಒಟ್ಟು ಆರು ಸಕ್ಕರೆ ಕಾರ್ಖಾನೆಗಳ ಗೋದಾಮಿಗೆ ಜಿಲ್ಲಾಡಳಿತ ಬುಧವಾರ ಬೀಗ ಜಡಿದು ದಾಸ್ತಾನು ವಶಕ್ಕೆ ಪಡೆದುಕೊಂಡಿದೆ.

ಬಾಗಲಕೋಟೆ ಜಿಲ್ಲೆಯ 9 ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಕೆಯ ಬಾಕಿ ಹಣವನ್ನು ರೈತರಿಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೇಘಣ್ಣವರ, ತಹಿಸೀಲ್ದಾರ್ ಮೂಲಕ ನೋಟಿಸ್ ಜಾರಿ ಮಾಡಿಸಿ ವಾರದ ಗಡುವು ನೀಡಿದ್ದರು.

ಗಡುವಿನೊಳಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಸಕ್ಕರೆ ದಾಸ್ತಾನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಮಧ್ಯೆ, ರೈತರ ಬಾಕಿ ಹಣ ಬಿಡುಗಡೆ ವಿಚಾರ ಸಂಬಂಧ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ನಡೆದ ಮಹತ್ವದ ಸಭೆ ವಿಫಲವಾಗಿದೆ. ಆದರೆ ಸಕ್ಕರೆ ಕಾರ್ಖಾನೆ ಮಾಲೀಕರ ಬಳಿ ದಾಸ್ತಾನಿರುವ 6 ಸಾವಿರ ಕೋಟಿ ಮೌಲ್ಯದ ಸಕ್ಕರೆಯನ್ನು ವಶಪಡಿಸಿಕೊಂಡು ಅದನ್ನು ಹರಾಜು ಹಾಕಿ ರೈತರ ಬಾಕಿ ಹಣ ವಾಪಸ್ ನೀಡುವುದಕ್ಕೆ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಾಸ್ತಾನು ಜಪ್ತಿ ಮಾಡಿಕೊಳ್ಳುವುದಕ್ಕೆ ಸರ್ಕಾರ ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com