ಶಿರಚ್ಛೇದ ಮಾಡಿ ನೇತು ಹಾಕಿದರು!

ಚಾರ್ಲಿ ಹೆಬ್ಡೋ ಬಳಿಕ ಫ್ರಾನ್ಸ್ ನಲ್ಲಿ ಮತ್ತೊಂದು ಉಗ್ರರ ದಾಳಿ ನಡೆದಿದೆ. ಅಮೆರಿಕನ್ ಗ್ರೂಪ್‍ನ ಗ್ಯಾಸ್ ಫ್ಯಾಕ್ಟರಿ ಮೇಲೆ ಬಂದೂಕುಧಾರಿ ಉಗ್ರನೊಬ್ಬ...
ಅಮೆರಿಕನ್ ಗ್ರೂಪ್‍ನ ಗ್ಯಾಸ್ ಫ್ಯಾಕ್ಟರಿ ಮುಂದೆ ನೆರೆದಿರುವ ಪೊಲೀಸರು
ಅಮೆರಿಕನ್ ಗ್ರೂಪ್‍ನ ಗ್ಯಾಸ್ ಫ್ಯಾಕ್ಟರಿ ಮುಂದೆ ನೆರೆದಿರುವ ಪೊಲೀಸರು

ಫ್ರಾನ್ಸ್: ಚಾರ್ಲಿ ಹೆಬ್ಡೋ ಬಳಿಕ ಫ್ರಾನ್ಸ್ ನಲ್ಲಿ ಮತ್ತೊಂದು ಉಗ್ರರ ದಾಳಿ ನಡೆದಿದೆ. ಅಮೆರಿಕನ್ ಗ್ರೂಪ್‍ನ ಗ್ಯಾಸ್ ಫ್ಯಾಕ್ಟರಿ ಮೇಲೆ ಬಂದೂಕುಧಾರಿ ಉಗ್ರನೊಬ್ಬ ದಾಳಿ ನಡೆಸಿದ್ದು, ಹಲವು ಬಾಂಬ್‍ಗಳನ್ನೂ ಸ್ಫೋಟಿಸಿದ್ದಾನೆ. ಒಬ್ಬ ವ್ಯಕ್ತಿಯ ಶಿರಚ್ಛೇದ ಮಾಡಿ, ಫ್ಯಾಕ್ಟರಿ ಗೇಟಿನಲ್ಲಿ ನೇತುಹಾಕಲಾಗಿದೆ.

ಜತೆಗೆ, ಅರಬ್ ಭಾಷೆಯ ಬರಹವಿರುವ ಧ್ವಜವನ್ನೂ ಅಲ್ಲಿ ನೆಡಲಾಗಿದೆ. ಕ್ಷಣಮಾತ್ರದಲ್ಲಿ ನಡೆದ ಈ ಘಟನೆ ಅಲ್ಲಿದ್ದವರನ್ನೆಲ್ಲ ಬೆಚ್ಚಿ ಬೀಳಿಸಿದೆ. ಬಾಂಬ್ ಸ್ಫೋಟದಿಂದ ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ. ಇದೇ ವೇಳೆ, ದಾಳಿಕೋರ ಯಾಸೀನ್ ಸಾಲ್ಹಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯನ್ನು ಭಯೋತ್ಪಾದನಾ ಕೃತ್ಯ ಎಂದು ಕರೆದಿರುವ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹಾಲೆಂಡ್, ಐರೋಪ್ಯ ಒಕ್ಕೂಟದ ಶೃಂಗದಿಂದ ಅರ್ಧಕ್ಕೇ ವಾಪಸ್ ಬಂದು ತುರ್ತು ಸಭೆ ಕರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com