ಅಮೆರಿಕಾ ವಿಮಾನ ದುರಂತ: ಮೂರು ಸಾವು

ಅಮೇರಿಕಾ ಮೆಸಚುಸೆತ್ ನಲ್ಲಿ ವಿಮಾನವೊಂದು ಮನೆಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಸ್ಫೋಟಗೊಂಡು ವಿಮಾನದಲ್ಲಿ ಚಲಿಸುತ್ತಿದ್ದ ಮೂವರೂ ಪ್ರಯಾಣಿಕರು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್: ಅಮೇರಿಕಾ ಮೆಸಚುಸೆತ್ ನಲ್ಲಿ ವಿಮಾನವೊಂದು ಮನೆಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಸ್ಫೋಟಗೊಂಡು ವಿಮಾನದಲ್ಲಿ ಚಲಿಸುತ್ತಿದ್ದ ಮೂವರೂ ಪ್ರಯಾಣಿಕರು ಸೋಮವಾರ ಮೃತಪಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮೂರು ಜನರನ್ನು ಹೊತ್ತಿದ್ದ ವಿಮಾನ ಪ್ಲೈನ್ವಿಲ್ಲಿಯ ಗೃಹವೊಂದಕ್ಕೆ ಭಾನುವಾರ ಢಿಕ್ಕಿ ಹೊಡೆದು, ಮೂವರೂ ಮೃತಪಟ್ಟಿದ್ದು, ಮನೆಯೂ ಅಗ್ನಿಗೆ ಆಹುತಿಯಾಗಿದೆ ಎಂದು ಸಿ ಎನ್ ಎನ್ ವರದಿ ಮಾಡಿದೆ.

"ಮನೆಗೆ ತಕ್ಷಣವೇ ಬೆಂಕಿ ಬಿದ್ದಿದೆ. ಮನೆಯಲ್ಲಿ ವಾಸವಾಗಿದ್ದ ನಾಲ್ಕು ಜನರು ಕೂಡಲೆ ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ" ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತರನ್ನು ಇನ್ನೂ ಗುರುತಿಸಬೇಕಿದೆ.

ಲ್ಯಾಂಚೆಸ್ಟರ್ ನಿಂದ ಹೊರಟಿದ್ದ ವಿಮಾನ, ಸ್ಫೋಟಗೊಂಡ ತಾಣದಿಂದ ೩೦ ಕಿಮೀ ದೂರವಿರುವ ನಾರ್ವುಡ್ ಮೆಮೋರಿಯಲ್ ವಿಮಾನ ನಿಲ್ದಾಣದೆಡೆಗೆ ಹೊರಟಿತ್ತು. ಸ್ಫೋಟಕ್ಕೆ ಕಾರಣಗಳು ತಿಳಿದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com