ನ್ಯಾಯಾಲಯದ ಅನುಕಂಪಕ್ಕಾಗಿ ಶ್ರೀಶಾಂತ್ ಸುಳ್ಳು ಸೃಷ್ಟಿಸಿದ್ದಾರೆ: ತಿಹಾರ್ ಜೈಲಿನ ಅಧಿಕಾರಿಗಳು

ಶ್ರೀಶಾಂತ್ ಮೇಲೆ ತಿಹಾರ್ ಜೈಲಿನಲ್ಲಿ ಹಲ್ಲೆಯಾಗಿತ್ತು ಎಂಬ ವಿಷಯವನ್ನು ತಳ್ಳಿ ಹಾಕಿರುವ ತಿಹಾರ್ ಜೈಲಿನ ಅಧಿಕಾರಿಗಳು,
ಶ್ರೀಶಾಂತ್
ಶ್ರೀಶಾಂತ್

ಮುಂಬೈ: ಶ್ರೀಶಾಂತ್ ಮೇಲೆ ತಿಹಾರ್ ಜೈಲಿನಲ್ಲಿ ಹಲ್ಲೆಯಾಗಿತ್ತು ಎಂಬ ವಿಷಯವನ್ನು ತಳ್ಳಿ ಹಾಕಿರುವ ತಿಹಾರ್ ಜೈಲಿನ ಅಧಿಕಾರಿಗಳು, ಇದು ನ್ಯಾಯಾಲಯದ ಅನುಕಂಪಕ್ಕಾಗಿ ಸೃಷ್ಟಿಸಿರುವ ಸುಳ್ಳು ಎಂದಿದ್ದಾರೆ.

ಶ್ರೀಶಾಂತ್ ಅವರ ಭಾವ ಮಧು ಬಾಲಕೃಷ್ಣ, ಕೇರಳದ ಖ್ಯಾತ ಹಾಡುಗಾರ, ಶ್ರೀಶಾಂತ್ ಮೇಲೆ ಗೂಂಡಾ ಒಬ್ಬ ಚೂಪಾದ ಆಯುಧದಿಂದ ಹಲ್ಲೆ ಮಾಡಿದ್ದ ಆದುದರಿಂದ ಅವರನ್ನು ಬೇರೆ ಸೆಲ್ಲಿಗೆ ವರ್ಗಾಯಿಸಲಾಗಿತ್ತು ಎಂದಿದ್ದರು.

"ಇದು ಶುದ್ಧ ಸುಳ್ಳು" ಎಂದಿದ್ದಾರೆ ತಿಹಾರ್ ಜೈಲಿನ ಕಾನೂನು ಅಧಿಕಾರಿ ಸುನಿಲ್ ಗುಪ್ತ.

"ಬೌಲರ್ ನಮಗೆ ಇದರ ಬಗ್ಗೆ ಎಂದೂ ದೂರು ನೀಡಲಿಲ್ಲ ಅಥವಾ ನಮ್ಮ ಗಮನಕ್ಕೂ ತರಲಿಲ್ಲ" ಎಂದಿರುವ ಅವರು "ಬಹುಷಃ ಶ್ರೀಶಾಂತ್ ಕುಟುಂಬದವರು ನ್ಯಾಯಾಲಯದ ಅನುಕಂಪ ಪಡೆಯಲು ಈ ಸುಳ್ಳು ಹೇಳಿದ್ದಾರೆ" ಎಂದಿದ್ದಾರೆ.

"ಶ್ರೀಶಾಂತ ಅವರ ವಿಚಾರಣೆ ದೆಹಲಿಯ ನ್ಯಾಯಾಲಯದಲ್ಲಿ ಮುಗಿದಿದ್ದು, ಮುಂದಿನ ತಿಂಗಳ ಮೊದಲ ವಾರದಲ್ಲಿ ತೀರ್ಪನ್ನು ನಿರೀಕ್ಷಿಸಲಾಗಿದೆ. ಇಂತಹ ಕಥೆಗಳನ್ನು ಹೇಳಿ ನ್ಯಾಯಾಧೀಶರನ್ನು ಪ್ರಭಾವಿಸಲು ಪ್ರಯತನ ಇದು" ಎಂದು ಗುಪ್ತಾ ಹೇಳಿದ್ದರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com