ನೋಕಿಯಾ ಉತ್ಪಾದನಾ ಕೇಂದ್ರಕ್ಕೆ ಮರು ಜೀವ ನೀಡಲಿರುವ ಮೋದಿ ಸರ್ಕಾರ

ಕೆಲಸ ಕಳೆದುಕೊಂಡಿದ್ದ 8000 ಕ್ಕೂ ಹೆಚ್ಚು ನೌಕರರಿಗೆ ಸಿಹಿ ಸುದ್ದಿಯಾಗಲಿರುವ ಕೇಂದ್ರ ಸರ್ಕಾರದ ಈ ನಡೆಯಲ್ಲಿ
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ/ ಚೆನ್ನೈ: ಕೆಲಸ ಕಳೆದುಕೊಂಡಿದ್ದ 8000 ಕ್ಕೂ ಹೆಚ್ಚು ನೌಕರರಿಗೆ ಸಿಹಿ ಸುದ್ದಿಯಾಗಲಿರುವ ಕೇಂದ್ರ ಸರ್ಕಾರದ ಈ ನಡೆಯಲ್ಲಿ ಶ್ರೀಪೆರುಂಬುದೂರು ನೋಕಿಯಾ ಮೊಬೈಲ್ ಹ್ಯಾಂಡ್ ಸೆಟ್ ಉತ್ಪಾದನಾ ಕೇಂದ್ರವನ್ನು ಮರು ಸ್ಥಾಪಿಸುವ ಯೋಜನೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಅವರ ಭಾಷಣಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾಗ ಉತ್ತರಿಸಿದ ನರೇಂದ್ರ ಮೋದಿ, "ಚೆನ್ನೈನಲ್ಲಿ ಕಳೆದ ವರ್ಷ ಮುಚ್ಚಲಾದ ನೋಕಿಯಾ ಘಟಕವನ್ನು ಮರು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದೇವೆ" ಎಂದಿದ್ದಾರೆ. ನೋಕಿಯಾ ಘಟಕ ಮುಚ್ಚಿದ್ದಕ್ಕೆ ಯುಪಿಎ ಸರ್ಕಾರವನ್ನು ದೂಷಿಸಿದ ಪ್ರಧಾನಿ "ಇದು ನಮ್ಮಿಂದ ಆದದ್ದಲ್ಲ ಬದಲಾಗಿ ಕಳೆದ ಸರ್ಕಾರದ ನೀತಿಗಳಿಂದ.. ನಾವು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬೇಕಾದರೆ ಮೇಕ್ ಇನ್ ಇಂಡಿಯಾ ಯೋಜನೆಗಳನ್ನು ಪೋಷಿಸಬೇಕು. ಮೂಲ ಸೌಕರ್ಯ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು" ಎಂದಿದ್ದರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರದ ತೆರಿಗೆ ನೀತಿಯ ಭೀತಿಯಿಂದ ನೋಕಿಯಾ ಚೆನ್ನೈ ಘಟಕಕ್ಕೆ ಕಳೆದ ವರ್ಷ ಬೀಗ ಜಡಿಯಲಾಗಿತ್ತು. ಈಗ ಈ ಘಟಕವನ್ನು ಮರು ಸ್ಥಾಪಿಸಲಾಗುವುದು ಎಂಬ ಸುದ್ದಿಗೆ ಉದ್ಯೋಗ ಕಡಿತಗೊಂಡಿದ್ದ ೮೦೦೦ ನೌಕರರನ್ನು ಪ್ರತಿನಿಧಿಸುವ ನೋಕಿಯಾ ಭಾರತದ ನೌಕರರ ಯುನಿಯನ್ ಹರ್ಷ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com