ಪತ್ರಿಕಾ ಕಚೇರಿ ಮೇಲೆ ದಾಳಿ: ಜರ್ಮನಿಯಲ್ಲಿ ೯ ಶಂಕಿತರ ಬಂಧನ

ವ್ಯಂಗ್ಯ ಪ್ರಧಾನ ಫ್ರೆಂಚ್ ಪತ್ರಿಕೆ ಚಾರ್ಲಿ ಹೆಬ್ಡೋ ಪ್ರಕಟಿಸಿದ್ದ ಪ್ರವಾದಿ ಮಹಮದ್ ಅವರ ವ್ಯಂಗ್ಯ ಚಿತ್ರ ಮರುಮುದ್ರಿಸಿತ್ತು ಎಂಬ ಕಾರಣಕ್ಕೆ
ಚಾರ್ಲಿ ಹೆಬ್ದೋ ದಾಳಿ ವಿರುದ್ಧ ನಡಿಗೆ
ಚಾರ್ಲಿ ಹೆಬ್ದೋ ದಾಳಿ ವಿರುದ್ಧ ನಡಿಗೆ

ಬರ್ಲಿನ್: ವ್ಯಂಗ್ಯ ಪ್ರಧಾನ ಫ್ರೆಂಚ್ ಪತ್ರಿಕೆ ಚಾರ್ಲಿ ಹೆಬ್ಡೋ ಪ್ರಕಟಿಸಿದ್ದ ಪ್ರವಾದಿ ಮಹಮದ್ ಅವರ ವ್ಯಂಗ್ಯ ಚಿತ್ರ ಮರುಮುದ್ರಿಸಿತ್ತು ಎಂಬ ಕಾರಣಕ್ಕೆ ಜನವರಿಯಲ್ಲಿ ಜರ್ಮನ್ ಪತ್ರಿಕೆಯೊಂದರ ಮೇಲೆ ದಾಳಿ ಮಾಡಿದ್ದ ೯ ಜನ ಶಂಕಿತರನ್ನು ಜರ್ಮನಿ ಪೊಲೀಸರು ತಾತ್ಕಾಲಿಕವಾಗಿ ಬಂಧಿಸಿದ್ದಾರೆ.

ಮುಂಜಾನೆಯಲ್ಲಿ ೧೨ ವಸತಿ ಸಮುಚ್ಚಯಗಳ ಮೇಲೆ ನಡೆದ ದಾಳಿಯಲ್ಲಿ ೧೬ ರಿಂದ ೨೧ ವಯಸ್ಸಿನ ೯ ಜನ ಯುವಕರನ್ನು ಬಂಧಿಸಿ ವಿಚಾರಣೆಗೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಹ್ಯಾಂಬರ್ಗ್ ನ ಪೊಲೀಸರು ತಿಳಿಸಿದ್ದಾರೆ.

ಜರ್ಮನ್, ನೈಜೀರಿಯಾ, ಕ್ಯಾಮರೂನಿಯ, ಟರ್ಕಿ ಮೂಲದ ಈ ಬಂಧಿತ ಯುವಕರು ಪತ್ರಿಕೆಯ ಕಚೇರಿಯ ಮೇಲೆ ನಡೆಸಿದ ದಾಳಿಗೂ ಮುಂಚೆ ಹತ್ತಿರದ ಹೈಸ್ಕೂಲ್ ಒಂದರ ಆಸ್ತಿ ಪಾಸ್ತಿಯನ್ನು ಒಡೆದು ಹಾಕಿದ್ದರು ಎಂದು ತಿಳಿದುಬಂದಿದೆ.

ಪ್ರಾದೇಶಿಕ ಟ್ಯಾಬ್ಲಾಯ್ಡ್ ಪತ್ರಿಕೆ ಹ್ಯಾಂಬರ್ಗರ್ ಮಾರ್ಗನ್ ಪೋಸ್ಟ್ ಮೇಲೆ ನಡೆದಿದ್ದ ಈ ದಾಳಿಯಲ್ಲಿ ಯಾವ ಸಾವು ನೋವೂ ಆಗಿಲ್ಲದಿದ್ದರು, ಆಸ್ತಿಗೆ ಹಾನಿಯಾಗಿತ್ತು. ಚಾರ್ಲಿ ಹೆಬ್ಡೊ ದಾಳಿಯ ೧೨ ದಿನಗಳ ನಂತರ ಈ ದಾಳಿ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com