ಕಾಟ್ಜು ಹೇಳಿಕೆಗಳನ್ನು ಖಂಡಿಸಿದ ರಾಜ್ಯಸಭೆ

ರಾಜಕೀಯ ವೈರುಧ್ಯಗಳನ್ನು ಮೀರಿ ರಾಜ್ಯಸಭೆಯಲ್ಲಿ ಎಲ್ಲ ಪಕ್ಷಗಳು ಒಮ್ಮತದಿಂದ ಮಾಜಿ ಸುಪ್ರಿಂ ಕೋರ್ಟ್ ನ್ಯಾಯಾಧೀಶ ಕಾಟ್ಜು ಅವರ ಹೇಳಿಕೆಗಳನ್ನು ಬುಧವಾರ ಖಂಡಿಸಿವೆ
ಮಾರ್ಕಂಡೆಯ ಕಾಟ್ಜು
ಮಾರ್ಕಂಡೆಯ ಕಾಟ್ಜು

ನವದೆಹಲಿ: ರಾಜಕೀಯ ವೈರುಧ್ಯಗಳನ್ನು ಮೀರಿ ರಾಜ್ಯಸಭೆಯಲ್ಲಿ ಎಲ್ಲ ಪಕ್ಷಗಳು ಒಮ್ಮತದಿಂದ ಮಾಜಿ ಸುಪ್ರಿಂ ಕೋರ್ಟ್ ನ್ಯಾಯಾಧೀಶ ಕಾಟ್ಜು ಅವರ ಹೇಳಿಕೆಗಳನ್ನು ಬುಧವಾರ ಖಂಡಿಸಿವೆ. ಕೆಲವು ಸದಸ್ಯರು ಮಾರ್ಕಂಡೇಯ ಕಾಟ್ಜು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೂಡ ಆಗ್ರಹಿಸಿವೆ. ಕಾಟ್ಜು ಅವರು ತಮ್ಮ ಬ್ಲಾಗ್ ಬರಹವೊಂದರಲ್ಲಿ ಗಾಂಧಿಯವರನ್ನು ಬ್ರಿಟಿಶ್ ಏಜೆಂಟ್ ಎಂದೂ, ಸುಭಾಶ್ ಚಂದ್ರ ಬೋಸ್ ಅವರನ್ನು ಜಪಾನಿ ಏಜೆಂಟ್ ಎಂದು ಕರೆದಿದ್ದರು.

ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ವಿರೋಧ ಪಕ್ಷದ ಸದಸ್ಯರು ಒಮ್ಮತದಿಂದ ಕಾಟ್ಜು ಹೇಳಿಕೆಗಳನ್ನು ಖಂಡಿಸಿ ನಿರ್ಣಯ ಹೊರಡಿಸಲು ಸದಸ್ಯರು ಮತ ಹಾಕಬೇಕೆಂದರು. "ಮಹಾತ್ಮ ಗಾಂಧಿ ಮತ್ತು ಸುಭಾಶ್ ಚಂದ್ರ ಬೋಸ್ ವಿರುದ್ದ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಹೇಳಿಕೆ ನೀಡಿರುವುದನ್ನು ಈ ಮನೆ ಒಮ್ಮತದಿಂದ ಖಂಡಿಸುತ್ತದೆ" ಎಂಬ ನಿರ್ಣಯವನ್ನು ಸಭಾಧ್ಯಕ್ಷ ಹಮಿದ್ ಅನ್ಸಾರಿ ಓದಿದರು.

ಇದಕ್ಕೂ ಮುಚೆ ಸರ್ಕಾರವು ಕೂಡ ಕಾಟ್ಜು ಹೇಳಿಕೆಗಳನ್ನು ಖಂಡಿಸಿ ನಿರ್ಣಯ ಹೊರಡಿಸಲು ಒಪ್ಪಿಕೊಂಡಿತ್ತು. ಇತರ ಸದಸ್ಯರ ಸಿಟ್ಟಿಗೆ ಸಹಮತ ತೋರಿದೆ ರಾಜ್ಯಸಭೆಯ ಮುಖಂಡ ಅರುಣ್ ಜೇಟ್ಲಿ "ಭಾರತ ಹೊಂದಿದ ಅತ್ಯುತ್ತಮ ನಾಗರಿಕ ಮಹಾತ್ಮ ಗಾಂಧಿ ಎಂಬುದುರಲ್ಲಿ ಎರಡು ಮಾತಿಲ್ಲ"  ಎಂದರು.

ಸದ್ಯದ ನಿಯಮದಲ್ಲಿ ಇಂತಹ ಮನಸ್ಥಿತಿಯವರು ನ್ಯಾಯಾಧೀಶರಾಗಿ ಆಯ್ಕೆಯಾಗಿಬಿಡುತ್ತಾರೆ. ಆದುದರಿಂದ ಈ ಸಡಿಲ ನಿಯಮವನ್ನು ಬದಲಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಕೂಡ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com