ಮಹಿಳಾ ಫುಟ್ಬಾಲ್ ಮೇಲೆ ಪಶ್ಚಿಮ ಬಂಗಾಳದಲ್ಲಿ ಫತ್ವಾ

ಪಶ್ಚಿಮ ಬಂಗಾಳದಲ್ಲಿ ಯಾವುದೇ ತಾಲಿಬಾನ್ ಇಲ್ಲ ಆದರೆ ಕೊಲ್ಕಾತ್ತದಿಂದ ೩೫೦ ಕಿಮೀ ದೂರದಲ್ಲಿರುವ ಮಾಲ್ಡದಲ್ಲಿ, ಮುಸ್ಲಿಂ ಧರ್ಮಗುರು ಹೊರಡಿಸಿದ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಯಾವುದೇ ತಾಲಿಬಾನ್ ಇಲ್ಲ ಆದರೆ ಕೊಲ್ಕಾತ್ತದಿಂದ ೩೫೦ ಕಿಮೀ ದೂರದಲ್ಲಿರುವ ಮಾಲ್ಡದಲ್ಲಿ, ಮುಸ್ಲಿಂ ಧರ್ಮಗುರು ಹೊರಡಿಸಿದ ಫತ್ವಾವೊಂದಕ್ಕೆ ತಲೆಬಾಗಿ ಜಿಲ್ಲಾಡಳಿತ ಮಹಿಳೆಯರ ಫುಟ್ಬಾಲ್ ಪ್ರದರ್ಶನ ಪಂದ್ಯವನ್ನು ನಿಷೇಧಿಸಿದ ಘಟನೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

"ಸಣ್ಣ ಉಡುಪು ಮತ್ತು ಬಿಗಿಯಾದ ಬಟ್ಟೆಗಳನ್ನು ಮಹಿಳೆಯರು ಧರಿಸುವುದು ಶರಿಯಾ ಕಾನೂನಿಗೆ ವಿರುದ್ಧ. ಪಂದ್ಯವನ್ನು ನೋಡುವುದು ಪಾಪದ ಕೆಲಸದ. ಇದನ್ನು ಗ್ರಾಮಸ್ಥರಿಗೆ ಹೇಳಿದೆ ಅವರು ಪಂದ್ಯವನ್ನು ತಡೆದರು" ಎಂದು ತಿಳಿಸಿರುವ ಹರಿಶ್ಚಂದ್ರಪುರದ ಚಂಡಿಪುರ್ ನ ಮಸೀದಿಯ ಇಮಾಂ ಮೊಹಮ್ಮದ ಮಕ್ಸುದ್ ಆಲಂ ಪಂದ್ಯದ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಮಹಿಳೆಯರು ಭಾಗವಹಿಸುವ ಫುಟ್ಬಾಲ್ ಪಂದ್ಯಗಳನ್ನು ನಿಷೇದಿಸುವಂತೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಪ್ರಗತಿಪರ ಯುವಕರ ಕ್ಲಬ್ ತಮ್ಮ ಸ್ವರ್ಣ ಹಬ್ಬದ ಸಂಭ್ರಮಕ್ಕಾಗಿ ಈ ಪಂದ್ಯವನ್ನು ಆಯೋಜಿಸಿತ್ತು ಇದರಲ್ಲಿ ರಾಷ್ಟೀಯ ಮಟ್ಟದ ಆಟಗಾರು ಭಾಗವಹಿಸುವರಿದ್ದರು. ಕ್ಲಬ್ಬಿನ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ಹಕ್ಕು ಕಾಯ್ದೆಯಡಿ, ಪಂದ್ಯ ನಿಷೇದಿಸಿದ ಕಾರಣವನ್ನು ಪ್ರಶ್ನಿಸಿದ್ದಾರೆ. ಕುತೂಹಲದ ಅಂಶವೆಂದರ ಕ್ಲಬ್ಬಿನ ಬಹುತೇಕ ಸದಸ್ಯರು ಬೆಂಗಾಲಿ ಮುಸ್ಲಿಮರು. ಜಿಲ್ಲಾಡಳಿತದ ಈ ಕ್ರಮದ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಕೋಲ್ಕತ್ತಾXI ಮತ್ತು ಉತ್ತರ ಬಂಗಾಳXI ವಿರುದ್ಧದ ಪ್ರದರ್ಶನ ಪಂದ್ಯವನ್ನು ಆಯೋಜಿಸಲಾಗಿತ್ತು. ರಾಷ್ಟ್ರೀಯ ಮಟ್ಟದ ಆಟಗಾರರು ಇದರಲ್ಲಿ ಭಾಗವಹಿಸಿ ಕ್ರೀಡೆಗಳಲ್ಲಿ ಹೆಚ್ಚಿನ ಮಹಿಳೆಯರು ಭಾಗವಹಿಸಲು ಉತ್ತೇಜನ ನೀಡುವವರಿದ್ದರು. ತಿಂಗಳುಗಳ ಹಿಂದೆಯೇ ಇದಕ್ಕೆ ಅನುಮತಿ ಕೇಳಿದ್ದೆವು ಹಾಗು ಅದು ದೊರಕಿತ್ತು ಕೂಡ. ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂಬ ನೆಪಕ್ಕೆ ಜಿಲ್ಲಾಡಳಿತ ಈ ಕೆಟ್ಟ ಸಂಘಟನೆಗಳಿಗೆ ಹೆದರುತ್ತಾರೆ ಎಂದು ನಿಜಕ್ಕೂ ನಾವು ಭಾವಿಸಿರಲಿಲ್ಲ" ಎನ್ನುತ್ತಾರೆ ಕ್ಲಬ್ಬಿನ ಅಧ್ಯಕ್ಷ ರೇಜಾ ರಝಿ.

ಕೊಲ್ಕೊತ್ತ ಪೊಲೀಸ್ ತಂಡಕ್ಕೆ ಆಡುವ ನೌಸಾಬಾ ಆಲಂ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು "೨೧ನೆ ಶತಮಾನದಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಎಂಬುದನ್ನು ಚಿಂತಿಸಲೂ ಕಷ್ಟ. ನಾನೂ ಧಾರ್ಮಿಕ ಮುಸ್ಲಿಂ ಕುಟುಂಬದಲ್ಲೇ ಬೆಳೆದು ಬಂದವನು. ನನ್ನ ಪೋಷಕರು ಫುಟ್ಬಾಲ್ ಆಡಲು ಉತ್ತೇಜಿಸಿದರು ಹಾಗೂ ಫುಟ್ಬಾಲ್ ಮೇಲೆ ಶರಿಯಾ ನಿಷೇಧವನ್ನು ನಾನು ಕೇಳಿಯೇ ಇಲ್ಲ. ನನ್ನ ಹಲವು ಮುಸ್ಲಿಂ ಗೆಳತಿಯರು ಕೋಲ್ಕತ್ತಾ ಕ್ಲಬ್ ಗಳಲ್ಲಿ ಫುಟ್ಬಾಲ್ ಆಡುತ್ತಾರೆ" ಎಂದಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com