
ಕೋಲ್ಕತ್ತ: ಕಾನ್ವೆಂಟ್ ಒಂದರಲ್ಲಿ ಗೂಂಡಾಗಳ ಗುಂಪಿನಿಂದ ರೇಪ್ ಗೆ ಒಳಗಾದ ನನ್ ಅವರನ್ನು ನಾಡಿಯಾ ಜಿಲ್ಲೆಯ ರಾಣಾಘಾಟ್ ನಲ್ಲಿ ಸೋಮವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ಮಾಡಿದ್ದಾರೆ. ಈಮಧ್ಯೆ ಘಟನೆಯ ಬಗ್ಗೆ ವರದಿ ಸಲ್ಲಿಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಪಂಚಾಯಿತಿ ಸಚಿವ ಸುಬ್ರತಾ ಮುಖರ್ಜಿ ಅವರ ಜೊತೆಗೆ ರಾಣಾಘಾಟ್ ನ ಜೀಸಸ್ ಮತ್ತು ಮೇರಿ ಕಾನ್ವೆಂಟ್ ಗೆ ಆಗಮಿಸಿ, ನಂತರ ಸಂಸ್ತ್ರಸ್ತ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ನಡೆದು ಹೋದರು. "ಇದು ಭಯಾನಕ ಘಟನೆ. ಅಪರಾಧಿಗಳನ್ನು ಬೇಗನೆ ಬಂಧಿಸಲಾಗುವುದು. ಅವರನ್ನು ಗಲ್ಲಿಗೆ ಹಾಕಬೇಕು. ಹಿರಿಯ ನನ್ ಅವರನ್ನು ಭೇಟಿ ಮಾಡಿದೆ. ಅವರು ಗುಣಮುಖರಾಗುತ್ತಿದ್ದಾರೆ. ಆರ್ಚ್ ಬಿಷಪ್ ಒಟ್ಟಿಗೆ ಕೂಡ ಮಾತನಾಡಿದ್ದೇನೆ" ಎಂದು ಮಮತಾ ತಿಳಿಸಿದರು.
ಆಸ್ಪತ್ರೆಯಿಂದ ಹೊರಗೆ ಹೊರಟಾಗ, ಭಿತ್ತಿಪತ್ರಗಳನ್ನು ಹಿಡಿದ ಸಾವಿರಾರು ಪ್ರತಿಭಟನಕಾರರು ಮಮತಾ ಆವರನ್ನು ಸುತ್ತುವರೆದು "ನಮಗೆ ನ್ಯಾಯ ಬೇಕು.. ಸಿಬಿಐ ಬೇಕು.. ಹಿಂದಕ್ಕೆ ಹೋಗಿ ಹಿಂದಕ್ಕೆ ಹೋಗಿ" ಎಂಬ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಕಾರರನ್ನು ಸಮಾಧಾನಪಡಿಸಲು ಪ್ರಾದೇಶಿಕ ಅರ್ಚಕರು ಪ್ರಯತ್ನಿಸಿದರು. ಧ್ವನಿವರ್ಧಕದಿಂದ ಪ್ರತಿಭಟನಕಾರರ ಜೊತೆ ಮಾತನಾಡಿದ ಮಮತಾ "ಈ ಪ್ರಕರಣವನ್ನು ರಾಜಕೀಯಗೊಳಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅವರಲ್ಲಿ ಕೆಲವರನ್ನು ಇಲ್ಲಿ ನಾನು ಕಾಣುತ್ತಿದ್ದೇನೆ. ಕೆಲವು ವಿಪಕ್ಷಗಳು ಅನ್ಯತಾ ತೊಂದರೆ ಸೃಷ್ಟಿಸುತ್ತಿದ್ದಾರೆ. ಧೈರ್ಯವಿದ್ದರೆ ಸಿಪಿಎಂ ಮತ್ತು ಬಿಜೆಪಿ ಪಕ್ಷದವರು ಇಲ್ಲಿ ಬಂದು ನನ್ನನು ಹೆದರಿಸಲಿ" ಎಂದಿರು.
"ಈ ವ್ಯೂಹಕ್ಕೆ ಬೀಳದಂತೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರನ್ನು ಮನವಿ ಮಾಡುತ್ತೇನೆ. ನಾನು ಇಲ್ಲಿದ್ದೇ ಈ ರಾಜಕೀಯ ಪಕ್ಷಗಳ ವ್ಯೂಹವನ್ನು ಬಹಿರಂಗಪಡಿಸುತ್ತೇನೆ. ಪೊಲೀಸರಿಗೆ ಹೇಳಿ ಇವರನ್ನೆಲ್ಲಾ ಇಲ್ಲಿಂದ ಓಡಿಸಬಹುದು, ಆದರೆ ನಾನು ಹೋರಾಟ ಮತ್ತು ಪ್ರತಿಭಟನೆಗಳಿಂದ ಮೇಲೆ ಬಂದವಳು. ಇವರ ಜೊತೆ ಹೇಗೆ ವರ್ತಿಸಬೇಕು ಎಂಬುದು ನನಗೆ ತಿಳಿದಿದೆ. ಅವರು ಇಲ್ಲಿಂದ ಹೊರನಡೆಯುವವರೆಗೂ ನಾನು ಇಲ್ಲಿಯೇ ಇರುತ್ತೇನೆ" ಎಂದರು.
Advertisement