ಡಿ ಕೆ ರವಿ ಸಾವಿನ ಪ್ರಕರಣ ಸಿಬಿಐಗೆ ಒಪ್ಪಿಸಲು ಎಬಿವಿಪಿ ಪ್ರತಿಭಟನೆ; ಪೊಲೀಸ್ ಲಾಠಿಚಾರ್ಜ್

ಐಎಎಸ್ ಅಧಿಕಾರಿ ಡಿ ಕೆ ರವಿ ಅವರ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಪಕ್ಷದ ವಿದ್ಯಾರ್ಥಿ ಘಟಕ ಎಬಿವಿಪಿ ಇಂದು ಬೀದಿಗಿಳಿದು
ಡಿ ಕೆ ರವಿ
ಡಿ ಕೆ ರವಿ

ಬೆಂಗಳೂರು: ಐಎಎಸ್ ಅಧಿಕಾರಿ ಡಿ ಕೆ ರವಿ ಅವರ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಪಕ್ಷದ ವಿದ್ಯಾರ್ಥಿ ಘಟಕ ಎಬಿವಿಪಿ ಇಂದು ಬೀದಿಗಿಳಿದು ಪ್ರತಿಭಟನೆ ನಡೆಸಿದೆ.

ಈ ಪ್ರತಿಭಟನೆ ಹಿಂಸೆಗೆ ತಿರುಗಿದ್ದರಿಂದ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.

ಪ್ರಾಮಾಣಿಕ ಅಧಿಕಾರಿ ಎಂದೆ ಹೆಸರುವಾಸಿಯಾದ ಡಿ ಕೆ ರವಿ ನಿಗೂಢ ರೀತಿಯಲ್ಲಿ, ವಸತಿ ಸಮುಚ್ಚಯದ ತಮ್ಮ ಮನೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ದಕ್ಷತೆಗೆ ಹೆಸರಾಗಿದ್ದ ಅಧಿಕಾರಿಯ ಮೇಲೆ ವಿಪರೀತ ರಾಜಿಕೀಯ ಒತ್ತಡ ಇತ್ತು ಎಂಬು ರವಿ ಅವರ ಕುಟುಂಬ ಸದಸ್ಯರು ದೂರಿದ್ದಲ್ಲದೆ ಈ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿತ್ತು. ಆದರೆ ಇದಕ್ಕೆ ಜಗ್ಗದ ರಾಜ್ಯಸರ್ಕಾರ ಈ ತನಿಖೆಯನ್ನು ಸಿಐಡಿಗೆ ವಹಿಸಿದ್ದಕ್ಕೆ ರಾಜ್ಯಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದು ಪ್ರತಿಭಟನೆಗಳು ನಡೆಯುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com