ಸಾಂದರ್ಭಿಕ ಚಿತ್ರ
ಪ್ರಧಾನ ಸುದ್ದಿ
ಸದನದೊಳಗೆ ಮೊಬೈಲ್ ಫೋನುಗಳನ್ನು ಬಳಸುವುದರ ವಿರುದ್ಧ ಎಚ್ಚರಿಕೆ ನೀಡಿದ ಬಿಹಾರ ಸ್ಪೀಕರ್
ಬಿಹಾರ ವಿಧಾನಸಭಾಧ್ಯಕ್ಷ ಉದಯ್ ನಾರಾಯಣ ಚೌಧರಿ, ಅಧಿವೇಶನ ಜಾರಿಯಲ್ಲಿದ್ದಾಗ ಸದಸ್ಯರು ಮೊಬೈಲ್ ಫೋನುಗಳನ್ನು ಬಳಸುವುದರ
ಪಾಟ್ನಾ: ಬಿಹಾರ ವಿಧಾನಸಭಾಧ್ಯಕ್ಷ ಉದಯ್ ನಾರಾಯಣ ಚೌಧರಿ, ಅಧಿವೇಶನ ಜಾರಿಯಲ್ಲಿದ್ದಾಗ ಸದಸ್ಯರು ಮೊಬೈಲ್ ಫೋನುಗಳನ್ನು ಬಳಸುವುದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಪ್ರಶ್ನೋತ್ತರ ಸಮಯದಲ್ಲಿ ಬಿಜೆಪಿ ಸದಸ್ಯ ಮಹೇಂದ್ರ ಬೈತಾ ಅವರ ಫೋನು ರಿಂಗಣಿಸಿದ್ದಕ್ಕೆ ಕೋಪಗೊಂದ ಸಭಾಧ್ಯಕ್ಷರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
"ನಿಮಗೆ ಗಂಭೀರತೆಯೇ ಇಲ್ಲ. ಇದು ಮೊಬೈಲ್ ಫೋನ್ ಬಳಸುವ ಜಾಗವಲ್ಲ" ಎಂದು ಸ್ಪೀಕರ್ ಬೈತಾ ಅವರನ್ನು ಎಚ್ಚರಿಸಿದ್ದಾರೆ.
ಇಂತಹ ಘಟನೆಗಳು ಮರುಕಳಿಸಿದರೆ ಸದನಕ್ಕೆ ಮೊಬೈಲ್ ಫೋನುಗಳನ್ನು ನಿಷೇಧಿಸುವುದಾಗಿ ಅವರು ಎಚ್ಚರಿಸಿದ್ದಾರೆ.
ಫೋನುಗಳು ಕೆಲಸ ಮಾಡದಂತೆ ಜ್ಯಾಮರ್ ಅಳವಡಿಸಲು ಕೆಲವು ಸದಸ್ಯರು ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ