ಆರ್ ಎಸ್ ಎಸ್ ಭಯೋತ್ಪಾದಕ ಸಂಘಟನೆಯೆಂದು ಘೋಷಿಸಲು ಅಮೆರಿಕಾ ನಕಾರ

ಭಾರತದ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯನ್ನು "ಭಯೋತ್ಪಾದನಾ ಸಂಘಟನೆ" ಎಂದು ಘೋಷಿಸುವಂತೆ ಸಲ್ಲಿಸಿರುವ ಕಾನೂನು ಅರ್ಜಿಯನ್ನು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಭಾರತದ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯನ್ನು "ಭಯೋತ್ಪಾದನಾ ಸಂಘಟನೆ" ಎಂದು ಘೋಷಿಸುವಂತೆ ಸಲ್ಲಿಸಿರುವ ಕಾನೂನು ಅರ್ಜಿಯನ್ನು ವಜಾ ಮಾಡಬೇಕೆಂದಿದ್ದೇವೆ ಎಂದು ಅಮೆರಿಕಾ ನ್ಯಾಯಾಲಯಕ್ಕೆ ತಿಳಿಸಿದೆ. ಇದಕ್ಕೆ ಏಪ್ರಿಲ್ ೧೪ರವರೆಗೆ ಸಮಯ ಕೋರಿದೆ.

ನ್ಯೂಯಾರ್ಕ್ ನ ದಕ್ಷಿಣ ಜಿಲ್ಲೆಯ ನ್ಯಾಯಾಧೀಶ ಲಾರಾ ಟೇಲರ್ ಸ್ವೈನ್ ಅವರಿಗೆ ಸಲ್ಲಿಸಿರುವ ನಿರ್ಣಯದಲ್ಲಿ ಯು ಎಸ್ ಸರ್ಕಾರದ ಅಟಾರ್ನಿ ಪ್ರೀತಿ ಭರಾರ "ಸರ್ಕಾರಕ್ಕೆ ಈ ನಿರ್ಣಯವನ್ನು ಅಂತಿಮಗೊಳಿಸಿ ದಾಖಲೆಗಳನ್ನು ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಬೇಕು" ಎಂದಿದ್ದಾರೆ.

ಅಮೇರಿಕ ಮೂಲದ ಹಕ್ಕುಗಳ ಸಂಘಟನೆ ಸಿಕ್ಸ್ ಫಾರ್ ಜಸ್ಟಿಸ್(ಎಸ್ ಎಫ್ ಜೆ), ಆರ್ ಎಸ್ ಎಸ್ ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಅಮೆರಿಕಾ ನ್ಯಾಯಾಲಯದಲ್ಲಿ ಕಾನೂನು ಸಮರ ಸಾರಿತ್ತು ಎಂದು ಎಸ್ ಎಫ್ ಜೆ ಅಟಾರ್ನಿ ಗುರ್ಪತ್ವಂತ್ ಎಸ್ ಪನ್ನುನ್ ಹೇಳಿದ್ದಾರೆ. ದಬ್ಬಾಳಿಕೆ ಸಿದ್ಧಾಂತವನ್ನು ನಂಬಿ ಪ್ರತಿಪಾದಿಸುವ ಹಾಗೂ ಭಾರತವನ್ನು ಏಕಮುಖವಾದ ಹಿಂದು ರಾಷ್ಟ್ರವನ್ನಾಗಿ ಪರಿವರ್ತಿಸುವ ಹಿಂಸಾತ್ಮಕ ಪ್ರಚಾರ ಕೈಗೊಳ್ಳುತ್ತಿರುವ ಸಂಘಟನೆ ಆರ್ ಎಸ್ ಎಸ್ ಎಂದು ಆಪಾದಿಸಿ ಈ ಕಾನೂನು ಅರ್ಜಿ ಸಲ್ಲಿಸಿದ್ದೆವು ಎಂದು ಅವರು ತಿಳಿಸಿದ್ದಾರೆ.

ಈ ವಿಷಯದಲ್ಲಿ ಪ್ರತಿಕ್ರಿಯಿಸಲು ನೆನ್ನೆ ಮಂಗಳವಾರದವರೆಗೆ ಅಮೆರಿಕಾ ಸರ್ಕಾರಕ್ಕೆ ಕೋರ್ಟ್ ಗಡುವು ನೀಡಿತ್ತು ಎಂದು ಸೆಕ್ರೆಟರಿ ಜಾನ್ ಕೆರ್ರಿ ಪರವಾಗಿ ಭರಾರ ಅವರ ಕಚೇರಿ ಒಪ್ಪಿಕೊಂಡಿದೆ. ಆದುದರಿಂದ ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರ ಈ ದೂರನ್ನು ವಜಾಮಾಡಲು ಸರ್ಕಾರ ಚಿಂತಿಸುತ್ತಿದ್ದು ದಾಖಲೆಗಳನ್ನು ಅಂತಿಮಗೊಳಿಸಲು ಹೆಚ್ಚಿನ ಕಾಲಾವಕೋಶ ಕೋರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com