ಈ ಹಿಂದೆ ರೈತರು ಕಷ್ಟ ಎದುರಿಸುತ್ತಿದ್ದಾಗ ಸೋನಿಯಾ ಎಲ್ಲಿದ್ದರು?: ಶಿವರಾಜ್ ಸಿಂಗ್ ಚೌಹಾನ್

ಮಳೆ ಪ್ರವಾಹದಿಂದ ತತ್ತರಿಸಿರುವ ಮಧ್ಯಪ್ರದೇಶದ ನೀಮಖ್ ಜಿಲ್ಲೆಗೆ ಸೋನಿಯಾ ಗಾಂಧಿ ಭೇಟಿ ನೀಡಲಿದ್ದಾರೆ ಎಂಬ ಸುದ್ದಿಯ ಹಿನ್ನಲೆಯಲ್ಲಿ,
ಶಿವರಾಜ್ ಸಿಂಗ್ ಚೌಹಾನ್
ಶಿವರಾಜ್ ಸಿಂಗ್ ಚೌಹಾನ್

ಭೋಪಾಲ್: ಮಳೆ ಪ್ರವಾಹದಿಂದ ತತ್ತರಿಸಿರುವ ಮಧ್ಯಪ್ರದೇಶದ ನೀಮಖ್ ಜಿಲ್ಲೆಗೆ ಸೋನಿಯಾ ಗಾಂಧಿ ಭೇಟಿ ನೀಡಲಿದ್ದಾರೆ ಎಂಬ ಸುದ್ದಿಯ ಹಿನ್ನಲೆಯಲ್ಲಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರನ್ನು ಸ್ವಾಗತಿಸಿದ್ದರೂ, ಯುಪಿಎ ಸರಕಾರವಿದ್ದಾಗ ನೈಸರ್ಗಿಕ ವಿಪತ್ತುಗಳಿಂದ ಈ ಹಿಂದೆ ರೈತರು ತತ್ತರಿಸಿದ್ದಾಗ ಕಾಂಗ್ರೆಸ್ ಅಧ್ಯಕ್ಷೆ ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ.

ಅಕಾಲಿಕ ಮಳೆಯಿಂದ ತತ್ತರಿಸಿರುವ ರೈತರನ್ನು ಭೇಟಿ ಮಾಡಲು ಸೋನಿಯಾ ಗಾಂಧಿ ನಾಳೆ ನೀಮಖ್ ಗೆ ಭೇಟಿ ನೀಡಲಿದ್ದಾರೆ.

"ಅವರು ನಮ್ಮ ಅತಿಥಿ ಮತ್ತು ಅವರನ್ನು ನಾನು ನಮ್ಮ ರಾಜ್ಯಕ್ಕೆ ಆಹ್ವಾನಿಸುತ್ತೇನೆ. ಆದರೆ ಈ ಹಿಂದಿನ ವರ್ಷಗಳಲ್ಲಿ ಇದಕ್ಕಿಂತಲೂ ದೊಡ್ಡ ನೈಸರ್ಗಿಕ ವಿಪತ್ತುಗಳಿಂದ ನಮ್ಮ ರೈತರು ತತ್ತರಿಸಿದ್ದಾಗ, ಅದೂ ಕೂಡ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಅವರೆಲ್ಲಿದ್ದರು" ಎಂದು ಪ್ರಶ್ನಿಸಿ ಚೌಹಾನ್ ಪಿಟಿಐಗೆ ತಿಳಿಸಿದ್ದಾರೆ.

"ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ವಿಪತ್ತುಗಳಿಂದ ರಾಜ್ಯಕ್ಕೆ ಉಂಟಾಗುತ್ತಿದ್ದ ನಷ್ಟಕ್ಕಿಂತಲೂ ಅತಿ ಕಡಿಮೆ ಪರಿಹಾರ ನೀಡುತ್ತಿದ್ದರು" ಎಂದು ದೂರಿದ್ದಾರೆ.

"ಕಳೆದ ವರ್ಷ ಮಧ್ಯಪ್ರದೇಶ ಸರ್ಕಾರ ೫೪೮೭ ಕೋಟಿ ಪರಿಹಾರ ಧನ ವಿತರಿಸಿದೆ. ದೇಶದಲ್ಲಿ ಬೇರೆ ಯಾವ ರಾಜ್ಯವೂ ಇಷ್ಟು ದೊಡ್ಡ ಮೊತ್ತದ ಪರಿಹಾರ ವಿತರಿಸಿಲ್ಲ" ಎಂದು ಅವರು ತಿಳಿಸಿದ್ದಾರೆ.

"ಈ ವರ್ಷ ವಿಪತ್ತಿನಿಂದ ನಾಲ್ಕು ಲಕ್ಷ ಹೆಕ್ಟೇರ್ ಪ್ರದೇಶ ಹಾನಿಗೊಂಡಿದೆ, ಇದಕ್ಕೆ ಹೋಲಿಸಿದರೆ ಕಳೆದ ವರ್ಷ ೩೫ ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಾನಿಗೊಂಡಿತ್ತು. ಆದರೆ ಆ ಸಮಯದಲ್ಲಿ ಅವರು(ಸೋನಿಯಾ ಗಾಂಧಿ) ಹಾನಿಗೊಳಗಾದ ರೈತರನ್ನು ಏಕೆ ಭೇಟಿ ಮಾಡಿರಲಿಲ್ಲ" ಎಂದು ಚೌಹಾನ್ ಹೇಳಿದ್ದರೆ.

"ಹಾನಿಗೊಂಡ ರೈತರನ್ನು ಈಗ ಹೇಗೆ ನೆನಪಿಸಿಕೊಳ್ಳೂತ್ತಿದ್ದರೆ ಎಂಬುದೇ ಅರ್ಥವಾಗುತ್ತಿಲ್ಲ" ಎಂದಿದ್ದಾರೆ ಚೌಹಾನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com