ಎರಡನೇ ವಿಶ್ವಯುದ್ಧ ಗೆಲುವಿನ ವಾರ್ಷಿಕ ಸಂಭ್ರಮಾಚರಣೆಯಲ್ಲಿ ಮಿಲಿಟರಿ ಶಕ್ತಿ ಪ್ರದರ್ಶಿಸಿದ ರಷ್ಯಾ

ನಾಜಿ ಜರ್ಮನಿಯ ವಿರುದ್ಧ ಎರಡನೆ ವಿಶ್ವಯುದ್ಧ ಗೆದ್ದ ನೆನಪಿನ ೭೦ನೆ ವರ್ಷಾಚರಣೆಗೆ ರಷ್ಯಾ ವೈಭವಯುತ ಮಿಲಿಟರಿ ಪೆರೇಡ್ ಅನ್ನು ಶನಿವಾರ ನಡೆಸಿತು.
ಎರಡನೇ ವಿಶ್ವಯುದ್ಧ ಗೆದ್ದ ಸಂಭ್ರಮಾಚರಣೆ
ಎರಡನೇ ವಿಶ್ವಯುದ್ಧ ಗೆದ್ದ ಸಂಭ್ರಮಾಚರಣೆ

ಮಾಸ್ಕೋ: ನಾಜಿ ಜರ್ಮನಿಯ ವಿರುದ್ಧ ಎರಡನೆ ವಿಶ್ವಯುದ್ಧ ಗೆದ್ದ ನೆನಪಿನ ೭೦ನೆ ವರ್ಷಾಚರಣೆಗೆ ರಷ್ಯಾ ವೈಭವಯುತ ಮಿಲಿಟರಿ ಪೆರೇಡ್ ಅನ್ನು ಶನಿವಾರ ನಡೆಸಿತು. ಉಕ್ರೇನ್ ಮೇಲಿನ ರಷ್ಯಾ ನಿಲುವನ್ನು ವಿರೋಧಿಸಿ ಹಲವು ರಾಷ್ಟ್ರದ ನಾಯಕರು ಈ ಕಾರ್ಯಕ್ರಮವನ್ನು ಬಹಿಷ್ಕರಿಸಿದರು. ಆದರೆ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಜರಿದ್ದರು.

ಭಾರತೀಯ ಸೇನೆ, ಚೈನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಸೈನಿಕರು ಸೇರಿದಂತೆ ಸುಮಾರು ೧೦ ಸಾವಿರ ಸೈನಿಕರು ಖ್ಯಾತ ರೆಡ್ ಸ್ಕ್ವೇರ್ ನಲ್ಲಿ ೯೦ ನಿಮಿಷದ ಈ ಪೆರೇಡ್ ನಲ್ಲಿ ಭಾಗಿಯಾಗಿದ್ದರು.

ಪ್ರಣಬ್ ಮುಖರ್ಜಿ, ಚೈನಾ ರಾಷ್ಟ್ರಪತಿ ಕ್ಸಿ ಜಿನ್ಪಿಂಗ್ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬೆನ್ ಕಿ ಮೂನ್ ಇವರ ಸಮ್ಮುಖದಲ್ಲಿ ರಷ್ಯಾ ರಾಷ್ಟ್ರಪತಿ ವ್ಲಾಡಿಮರ್ ಪುಟಿನ್ ಪೆರೇಡ್ ವೀಕ್ಷಿಸಿದರು.

ಎರಡನೇ ವಿಶ್ವಯುದ್ಧದಲ್ಲಿ ರಷ್ಯಾದ ಮೈತ್ರಿ ದೇಶಗಳಾಗಿದ್ದ ಬ್ರಿಟನ್ ಮತ್ತು ಫ್ರಾನ್ಸ್ ಉಕ್ರೇನಿನ ಮೇಲೆ ರಷ್ಯಾದ ನಿಲುವನ್ನು ವಿರೋಧಿಸಿ ಈ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದವು.

ರೆಡ್ ಸ್ಕ್ವೇರ್ ನ ಈ ಪೆರೇಡ್ ನಲ್ಲಿ ತಂತ್ರಜ್ಞಾದಲ್ಲಿ ಅತಿ ಮುಂಚೂಣಿಯಲ್ಲಿರುವ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಲಾಯಿತು.

ಎರಡನೇ ವಿಷವಯುದ್ಧದಲ್ಲಿ ಸುಮಾರು ೨೭ ದಶಲಕ್ಷ ರಷ್ಯಾದ ಸೈನಿಕರು ಹಾಗೂ ನಾಗರಿಕರು ಮೃತಪಟ್ಟಿದ್ದರು ಎಂದು ಅಂದಾಜಿಸಲಾಗಿತ್ತು. ಈ ಕೆಂಪು ಸೇನೆಯ ಗೆಲುವನ್ನು ಇಂದಿಗೂ ರಾಷ್ಟ್ರೀಯ ಹೆಮ್ಮೆ ಎಂದು ಪರಿಗಣಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com