ಕೃಷ್ಣಮೃಗ ಭೇಟೆ; ಪ್ರತ್ಯಕ್ಷದರ್ಶಿ ಮರುವಿಚಾರಣೆಗೆ ಸಲ್ಲಿಸಿದ್ದ ಸಲ್ಲು ಮನವಿ ವಜಾ

೧೯೯೮ರ ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಪ್ರತ್ಯಕ್ಷದರ್ಶಿಗಳನ್ನು ಮರುವಿಚಾರಣೆ ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು
ಸಲ್ಮಾನ್ ಖಾನ್
ಸಲ್ಮಾನ್ ಖಾನ್
Updated on

೧೯೯೮ರ ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಪ್ರತ್ಯಕ್ಷದರ್ಶಿಗಳನ್ನು ಮರುವಿಚಾರಣೆ ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಜೋಧ್ ಪುರ ಕೋರ್ಟ್ ತಿರಸ್ಕರಿಸಿದೆ. ಇದು ನಟನಿಗೆ ಭಾರಿ ಹಿನ್ನಡೆ ಆಗಲಿದೆ ಎನ್ನಲಾಗಿದೆ.

ಏಪ್ರಿಲ್ ೨೯ ೨೧೦೫ ರಂದು ತಾವು ತಪ್ಪಿತಸ್ಥರಲ್ಲ ಎಂದು ಕೋರ್ಟ್ ಮುಂದೆ ಮನವಿ ಮಾಡಿದ್ದ ಸಲ್ಮಾನ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನ ಪ್ರತ್ಯಕ್ಷದರ್ಶಿಗಳನ್ನು ಮರುವಿಚಾರಣೆಗೆ ಒಳಪಡಿಸುವಂತೆ ಮನವಿ ಮಾಡಿದ್ದರು.

ಸೂರಜ್ ಭಯ್ಯ ಅವರ 'ಹಮ್ ಸಾಥ್ ಹೈ' ಸಿನೆಮಾದ ಚಿತ್ರೀಕರಣದ ವೇಳೆ ಈ ಪ್ರಕರಣ ನಡೆದು ಸಲ್ಮಾನ್ ಖಾನ್ ಮೇಲೆ ಕೇಸು ದಾಖಲಾಗಿತ್ತು. ಇವರು ಉಪಯೋಗಿಸಿದ್ದ ಬಂಧೂಕಿನ ಪರವಾನಗಿಯ ಅವಧಿ ಕೂಡ ಮುಗಿದಿತ್ತಾದ್ದರಿಂದ ಶಸ್ತ್ರಾಸ್ತ್ರ ಕಾಯ್ದೆ ೧೯೯೮ ರ ಅಡಿಯಲ್ಲು ಪ್ರಕರಣ ದಾಖಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com