
ಮುಂಬೈ: ಕಳೆದ 42 ವರ್ಷಗಳಿಂದ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಜೀವಚ್ಛವವಾಗಿ ಮಲಗಿದ್ದ ಅರುಣಾ ರಾಮಚಂದ್ರ ಶಾನಭಾಗ್ ಅವರ ಸೋಮವಾರ ನಿಧನರಾಗಿದ್ದಾರೆ.
ಅತ್ಯಾಚಾರಕ್ಕೊಳಗಾಗಿ ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ಕೋಣೆಯೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅರುಣಾ ಶಾನಭಾಗ(68) ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಕಳೆದ ಅವರನ್ನು ತೀವ್ರ ನಿಗಾ ಘಟಕಾದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.
ಮುಂಬೈನಲ್ಲಿ ನರ್ಸ್ ಆಗಿದ್ದ ಅರುಣಾ ಶಾನಭಾಗ್ ಅವರನ್ನು ಅದೇ ಆಸ್ಪತ್ರೆಯ ವಾರ್ಡ್ ಬಾಯ್ ಆಗಿದ್ದ ಸೋಹನ್ ಲಾಲ್ ಭಟ್ರಾ ವಾಲ್ಮಿಕಿ ಎಂಬಾತ ಆಕೆಯನ್ನು 1973ರಲ್ಲಿ ಭೀಕರವಾಗಿ ಅತ್ಯಾಚಾರ ಎಸಗಿದ್ದ. ಘಟನೆಯ ಬಳಿಕ ಅರುಣಾ ಅವರು ಪ್ರಜ್ಞೆ ಕಳೆದುಕೊಂಡಿದ್ದು, ಸತತ 42 ವರ್ಷಗಳಿಂದ ಜೀವಚ್ಛವವಾಗಿ ಹಾಸಿಗೆಯಲ್ಲಿ ಮಲಗಿದ್ದರು. ಈ ದುಷ್ಕೃತ್ಯಕ್ಕೆ ಕಾರಣನಾದ ವಾಲ್ಮಿಕಿಯನ್ನು ಅದೇ ಆಸ್ಪತ್ರೆಯಲ್ಲಿ ನಾಯಿ ಚೈನಿನಿಂದ ನಿಯಂತ್ರಿಸಲಾಗಿದೆ.
ಜೀವಚ್ಛವವಾಗಿ ಮಲಗಿದ್ದ ಅರುಣಾ ಶಾನಭಾಗ್ ಅವರಿಗೆ ದಯಾಮರಣ ಕರುಣಿಸಬೇಕು ಎಂದು ಪತ್ರಕರ್ತೆ ಪಿಂಕಿ ವಿನಾನಿ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ 2011ರಲ್ಲಿ ಸುಪ್ರೀಂಕೋರ್ಟ್ ದಯಾಮರಣ ಅರ್ಜಿಯನ್ನು ತಿರಸ್ಕರಿಸಿತ್ತು. ಅರುಣಾರಿಗೆ ದಯಾಮರಣ ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು.
Advertisement