ಸೊಸೆ ಸೇರಿ 3 ಮೊಮ್ಮಕ್ಕಳ ಸಜೀವ ದಹನ: ಮಾಜಿ ಸಂಸದ, ಪತ್ನಿ, ಪುತ್ರನ ಬಂಧನ

ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಸೊಸೆ ಹಾಗೂ ಮೂವರು ಮೊಮ್ಮಕ್ಕಳು ಸಜೀವ ದಹನವಾದ ಘಟನೆ ಸಂಬಂಧ...
ಅಗ್ನಿ ಅವಘಡ ಸಂಭವಿಸಿದ ಮನೆ(ಒಳ ಚಿತ್ರ ಸಿರಿಸಿಲ್ಲಾ ರಾಜ್ಯಯ್ಯ)
ಅಗ್ನಿ ಅವಘಡ ಸಂಭವಿಸಿದ ಮನೆ(ಒಳ ಚಿತ್ರ ಸಿರಿಸಿಲ್ಲಾ ರಾಜ್ಯಯ್ಯ)

ವಾರಂಗಲ್: ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಸೊಸೆ ಹಾಗೂ ಮೂವರು ಮೊಮ್ಮಕ್ಕಳು ಸಜೀವ ದಹನವಾದ ಘಟನೆ ಸಂಬಂಧ ತೆಲಂಗಾಣ ಕಾಂಗ್ರೆಸ್ ಮಾಜಿ ಸಂಸದ ಸಿರಿಸಿಲ್ಲಾ ರಾಜ್ಯಯ್ಯ ಹಾಗೂ ಪತ್ನಿ, ಪುತ್ರನನ್ನು ಬುಧವಾರ ಬಂಧಿಸಿದ್ದಾರೆ.

ಮಾಜಿ ಸಂಸದ ರಾಜಯ್ಯ ಅವರ ಸೊಸೆ ಸಾರಿಕಾ ಮತ್ತು ಅವರ ಮೂವರು ಮೊಮ್ಮಕ್ಕಳಾದ ಅಭಿನಾ, ಅಯಾನ್ ಮತ್ತು ಶ್ರೀಯಾನ್ ಅವರು ಇಂದು ಬೆಳಗ್ಗೆ ಅಗ್ನಿ ಅವಘಡದಲ್ಲಿ ಸಜೀವ ದಹನವಾಗಿದ್ದರು.

ಬೆಂಕಿ ಅವಘಡಕ್ಕೆ ಗ್ಯಾಸ್ ಸೋರಿಕೆ ಕಾರಣ ಎನ್ನಲಾಗುತ್ತಿದೆ. ಆದರೆ ಸಾರಿಕಾ ತಾಯಿ ಮತ್ತು ಸಹೋದರಿ ಉದ್ದೇಶಪೂರ್ವಕ ಕೊಲೆ ಎಂದು ಆರೋಪಿಸಿದ್ದು, ಈ ಸಂಬಂಧ ರಾಜಯ್ಯ ಹಾಗೂ ಪತ್ನಿ ಮಾದೇವಿ, ಪುತ್ರ ಅನಿಲ್ ವಿರುದ್ಧ ಬೇಗಂಪೇಟ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಹಿಂದೆ ರಾಜಯ್ಯ ಅವರ ಕುಟುಂಬದಲ್ಲಿ ಸಮಸ್ಯೆಗಳಿವೆ ಎಂಬ ಹಲವು ಸುದ್ದಿಗಳು ಕೇಳಿಬಂದಿತ್ತು. ರಾಜಯ್ಯ ಅವರ ಪುತ್ರ ಅನಿಲ್ ಅವರೊಂದಿಗೆ ಸಾರಿಕಾ 2002ರಲ್ಲಿ ವಿವಾಹವಾಗಿದ್ದರು. ಬಳಿಕ ಗಂಡನಿಗೆ ವಿವಾಹೇತರ ಸಂಬಂಧವಿದೆ ಎಂದು ಆರೋಪ ಮಾಡಿದ್ದ ಸಾರಿಕಾ ಮಾವ ರಾಜಯ್ಯ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com