
ನವದೆಹಲಿ: ದೆಹಲಿ ಚಳಿಗಾಲದ ವಿಧಾನಸಭಾ ಅಧಿವೇಶನದಿಂದ ಎಎಪಿ ಶಾಸಕ ಪಂಕಜ್ ಪುಷ್ಕರ್ ಅವರನ್ನು ಎರಡು ದಿನಗಳ ಕಾಲ ವಜಾ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ನರ್ಸರಿ ನೇಮಕಾತಿಯಲ್ಲಿ ೨೫% ಮೀಸಲಾತಿ ನೀಡುವುದರ ಬಗ್ಗೆ ಚರ್ಚೆ ಮಾಡುವಂತೆ ಅವರು ಆಗ್ರಹಿಸಿದ್ದರು.
ಅವರನ್ನು ಮಾರ್ಷಲ್ ಗಳು ವಿಧಾಸಭೆಯಿಂದ ಹೊರಹಾಕಿದ್ದಾರೆ.
ಈ ನಡೆಯಿಂದ ಕುಪಿತರಾಗಿರುವ ಪುಷ್ಕರ್ ವಿಧಾನಸಭೆಯ ಹೊರಗೆ ಧರಣಿ ನಡೆಸಿ ಈ ನಡೆಯನ್ನು ಅನೈತಿಕ ಎಂದಿದ್ದಾರೆ.
"ನಾನು ವಿಧಾನಸಭೆಯ ಕಲಾಪಗಳಿಗೆ ಅಡ್ಡಿಪಡಿಸಲಿಲ್ಲ. ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ನರ್ಸರಿ ನೇಮಕಾತಿಯಲ್ಲಿ ೨೫% ಮೀಸಲಾತಿ ನೀಡುವುದರ ಬಗ್ಗೆ ಹೈಕೋರ್ಟ್ ತೀರ್ಪನ್ನು ಚರ್ಚಿಸುವಂತೆ ಕೇಳಿಕೊಂಡೆ" ಎಂದು ದೆಹಲಿ ತಿಮಾರ್ಪುರ ಕ್ಷೇತ್ರದ ಶಾಸಕ ಹೇಳಿದ್ದಾರೆ.
"ನನ್ನನ್ನು ಮಾರ್ಷಲ್ ಗಳು ಹೊರ ಹಾಕಿದ್ದು ಹಾಗು ಎರಡು ದಿನಗಳ ಕಾಲ ವಜಾ ಮಾಡಿದ್ದು ಅನೈತ ನಡೆ" ಎಂದು ಕೂಡ ಅವರು ಹೇಳಿದ್ದಾರೆ.
Advertisement