ಇದು ಗ್ಯಾಂಗ್‌ರೇಪ್ ಅಲ್ಲ ಎಂದಿದ್ದ ಗೃಹ ಸಚಿವರಿಂದ ಕ್ಷಮೆಯಾಚನೆ

22 ವರ್ಷದ ಬಿಪಿಒ ಉದ್ಯೋಗಿ ಮೇಲಿನ ಅತ್ಯಾಚರ ಗ್ಯಾಂಗ್‌ರೇಪ್ ಅಲ್ಲ ಎಂದಿದ್ದ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಶುಕ್ರವಾರ ಕ್ಷಮೆಯಾಚಿಸಿದ್ದಾರೆ.
ಕೆ.ಜೆ.ಜಾರ್ಜ್
ಕೆ.ಜೆ.ಜಾರ್ಜ್

ಬೆಂಗಳೂರು: 22 ವರ್ಷದ ಬಿಪಿಒ ಉದ್ಯೋಗಿ ಮೇಲಿನ ಅತ್ಯಾಚರ ಗ್ಯಾಂಗ್‌ರೇಪ್ ಅಲ್ಲ ಎಂದಿದ್ದ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಶುಕ್ರವಾರ ಕ್ಷಮೆಯಾಚಿಸಿದ್ದಾರೆ.

ಮಧ್ಯಪ್ರದೇಶದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಸಂಬಂಧ ಇಡೀ ನಗರದ ಜನತೆ ಆತಂಕದಿಂದ ಕುಳಿತಿದ್ದರೆ, ರಾಜ್ಯದ ಗೃಹ ಸಚಿವರು ಮಾತ್ರ ಸಂಖ್ಯಾಧಾರಿತವಾಗಿ ಗ್ಯಾಂಗ್‍ರೇಪ್ ಅನ್ನು ವ್ಯಾಖ್ಯಾನಿಸಿದ್ದರು. ಇಬ್ಬರು ರೇಪ್ ಮಾಡಿದ್ರೆ ಅದು ಗ್ಯಾಂಗ್‍ರೇಪ್ ಹೇಗೆ ಆಗುತ್ತೆ, ಕಡೇ ಪಕ್ಷ 3 ರಿಂದ 4 ಮಂದಿ ರೇಪ್ ಮಾಡಿರಬೇಕಲ್ಲವೇ ಎಂದು ಪ್ರಶ್ನಿಸಿದ್ದರು.

ಘಟನೆ ಸಂಬಂಧ ಮಾಧ್ಯಮಗಳು ಜಾರ್ಜ್ ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗ, ಈ ಪ್ರಕರಣವನ್ನು ಹೇಗೆ ಗ್ಯಾಂಗ್‍ರೇಪ್ ಎಂದು ಕರೆಯುತ್ತೀರಿ?  ಗ್ಯಾಂಗ್‍ರೇಪ್ ಎಂದು ಕರೆಯಬೇಕಾದರೆ 3 ಅಥವಾ 4ಕ್ಕಿಂತ ಹೆಚ್ಚು ಮಂದಿ ಇರಬೇಕು ಎಂದಿದ್ದರು. ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ಜಾರ್ಜ್ ಕ್ಷಮೆಯಾಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com