ನದಿ ತೀರದ ಹಕ್ಕು ಚಲಾವಣೆಗೆ ಚಿಂತನೆ: ನಿರಂಜನ ರೈ ಘೋಷಣೆ

ಎತ್ತಿನಹೊಳೆ ಯೋಜನೆ ಕುರಿತು ಸರ್ಕಾರ ಸೂಕ್ತ ಮಾಹಿತಿ ನೀಡದೆ, ಜಿಲ್ಲೆಯ ಜನರನ್ನು ವಂಚಿಸುತ್ತಿದೆ. ಈ ಹಿನ್ನೆಲೆಯಲ್ಲಿ `ರೈಪೇರಿಯನ್ ರೈಟ್ಸ್ (ನದಿ ತೀರದ ಹಕ್ಕುಗಳು)' ಅಡಿಯಲ್ಲಿ ಪ್ರಶ್ನಿಸಲಾಗುವುದು...
ಎತ್ತಿನ ಹೊಳೆ ವಿವಾದ (ಸಂಗ್ರಹ ಚಿತ್ರ)
ಎತ್ತಿನ ಹೊಳೆ ವಿವಾದ (ಸಂಗ್ರಹ ಚಿತ್ರ)

ಪುತ್ತೂರು: ಎತ್ತಿನಹೊಳೆ ಯೋಜನೆ ಕುರಿತು ಸರ್ಕಾರ ಸೂಕ್ತ ಮಾಹಿತಿ ನೀಡದೆ, ಜಿಲ್ಲೆಯ ಜನರನ್ನು ವಂಚಿಸುತ್ತಿದೆ. ಈ ಹಿನ್ನೆಲೆಯಲ್ಲಿ `ರೈಪೇರಿಯನ್ ರೈಟ್ಸ್ (ನದಿ ತೀರದ ಹಕ್ಕುಗಳು)' ಅಡಿಯಲ್ಲಿ ಪ್ರಶ್ನಿಸಲಾಗುವುದು ಎಂದು ದಕ್ಷಿಣ ಕನ್ನಡ ನೇತ್ರಾವತಿ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷ ಡಾ. ನಿರಂಜನ ರೈ ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಮಾತನಾಡಿದ ಅವರು, ರೈಪೇರಿಯನ್ ರೈಟ್ಸ್ ಅಡಿಯಲ್ಲಿ ಯೋಜನೆಯ ಎಲ್ಲ ಮಾಹಿತಿ ಪಡೆಯಲಾಗುತ್ತಿದೆ.  ಇದರ ಆಧಾರದಲ್ಲಿ ಯೋಜನೆ ವಿರುದ್ಧ ಕಾನೂನು ಹೋರಾಟಕ್ಕೆ  ಸಿದ್ಧತೆ ನಡೆಸಲಾಗುತ್ತಿದೆ. ನದಿಯ ಕೆಳಭಾಗದ ಜನರ ವಿರೋಧ ಲೆಕ್ಕಿಸದೆ ಯೋಜನೆ ಜಾರಿಗೊಳಿಸಲು ಸರ್ಕಾರ ಮುಂದಾಗಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು,'' ಎಂದರು. ``ಬಯಲು ಸೀಮೆಯಲ್ಲಿ ನೀರಿನ ಕೊರತೆ ಉಂಟಾಗಲು ಅನಿಯಮಿತ ಬೋರ್‍ವೆಲ್ ಬಳಕೆಗೆ ಸರ್ಕಾರ ಪ್ರೊ.ೀತ್ಸಾಹ ನೀಡಿದ್ದೇ ಕಾರಣ. ಮಳೆ ನೀರನ್ನು ಆ ಭಾಗದ ಜನತೆ ಸಮರ್ಪಕವಾಗಿ ಬಳಕೆ  ಮಾಡುತ್ತಿಲ್ಲ. ಮಳೆಕೊಯ್ಲು ಮಾಡಿದರೆ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಿದೆ,'' ಎಂದು ಹೇಳಿದರು.

ಎರಡನೇ ದಿನಕ್ಕ ಪಾದಯಾತ್ರೆ ಬಂಟ್ವಾಳ
ಯೋಜನೆ ಯನ್ನು ವಿರೋಧಿಸಿ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವತದಲ್ಲಿ ನಡೆಯುತ್ತಿರುವ ಜಾಥ 2ನೇ ದಿನಕ್ಕೆ ಕಾಲಿಟ್ಟಿದೆ. ಬಿ.ಸಿ. ರಸ್ತೆಯಿಂದ ಪಾದಯಾತ್ರೆ ಆರಂಭವಾಯಿತು .  ಹಲವು ಮುಖಂಡರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಕಾಲ್ನಡಿಗೆಯಾತ್ರೆ ರಾಷ್ಟ್ರೀಯ ಹೆದ್ದಾರಿ ತಲುಪುತ್ತಿದ್ದಂತೆಯೇ ಆರ್ ಎಸ್‍ಎಸ್ ಮುಖಂಡ ಡಾ. ಪ್ರಭಾಕರ ಭಟ್ ಹಾಗೂ ಪತ್ನಿ ಕಮಲಾ ಪ್ರಭಾಕರ ಭಟ್ ಪಾದಯಾತ್ರೆ ಸೇರಿಕೊಂಡರು.

ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಕ್ಕೆ ನನ್ನ ಬೆಂಬಲವಿದೆ. ಸದ್ಯಕ್ಕೆ ಪರ್ಯಾಯೋತ್ಸವದ ಸಿದ್ಧತೆ ಇರುವುದಿರಂದ ಹೋರಾಟದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.  ಯೋಜನೆಯನ್ನು ಮರುಪರಿಶೀಲಿಸದಿದ್ದರೆ ದೇಶಕ್ಕೂ ನಷ್ಟ, ಕರಾವಳಿಗೂ ನಷ್ಟ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಎರಡೂ ಕಡೆಯ ತಜ್ಞರ ತಂಡವನ್ನು ಕರೆದು ಸಮಾಲೋಚನೆ ನಡೆಸಬೇಕು.
-ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠಾಧೀಶ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com