ಜಗನ್ ಉಪಾವಾಸಕ್ಕೆ ಪೊಲೀಸರ ಅಡ್ಡಿ; ಆಸ್ಪತ್ರೆಗೆ ದಾಖಲು

ವೈ ಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ ಮಾಡುತ್ತಿದ್ದ ಅನಿರ್ಧಿಷ್ಟ ಕಾಲದವರೆಗೆ ಉಪವಾಸಕ್ಕೆ ಅಡ್ಡಿ ಮಾಡಿರುವ ಪೊಲೀಸರು ಮಂಗಳವಾರ ಅವರನ್ನು ಆಸ್ಪತ್ರೆಗೆ
ವೈ ಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ
ವೈ ಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ

ಗುಂಟೂರು: ವೈ ಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ ಮಾಡುತ್ತಿದ್ದ ಅನಿರ್ಧಿಷ್ಟ ಕಾಲದವರೆಗೆ ಉಪವಾಸಕ್ಕೆ ಅಡ್ಡಿ ಮಾಡಿರುವ ಪೊಲೀಸರು ಮಂಗಳವಾರ ಅವರನ್ನು ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿದ್ದು, ಬಲವಂತವಾಗಿ ಅವರಿಗೆ ದ್ರವ ಪದಾರ್ಥಗಳನ್ನು ನೀಡಲಾಗಿದೆ.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ವಿರೋಧ ಪಕ್ಷದ ನಾಯಕ ಜಗನ್ ಅವರು ಆರು ದಿನಗಳಿಂದ ಉಪವಾಸ ನಡೆಸಿದ್ದರು.

ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿದ್ದರಿಂದ ಪೊಲೀಸರು ಸುಮಾರು ಬೆಳಗ್ಗೆ ೪ ಘಂಟೆಗೆ ಜಗನ್ ಉಪವಾಸ ನಡೆಸುತ್ತಿದ್ದ ಜಾಗಕ್ಕೆ ಬಂದು, ಆಂಬ್ಯುಲೆನ್ಸ್ ನೆರವಿನಿಂದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅವರನ್ನು ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿದೆ.

ಜಗನ್ ಅವರ ತಾಯಿ ವಿಜಯಮ್ಮ, ಪತ್ನಿ ಭಾರತಿ ಮತ್ತು ಇತರ ಕುಟುಂಬ ಸದಸ್ಯರು ಹಾಗು ಪಕ್ಷದ ಸದಸ್ಯರು ಅವರನ್ನು ಕಾಣಲು ಆಸ್ಪತ್ರೆಗೆ ಬಂದಿದ್ದಾರೆ.

ವಿವಿಧ ಪ್ರದೇಶಗಳಿಂದ ಬಂದಿದ್ದ ಪಕ್ಷದ ಕಾರ್ಯಕರ್ತರ ಆಕ್ರೋಶವನ್ನು ಪೊಲೀಸರು ಎದುರಿಸಬೇಕಾಗಿ ಬಂತು ಎಂದು ತಿಳಿದುಬಂದಿದೆ. ಸರ್ಕಾರದ ಈ ನಡೆಯಿಂದ ತೀವ್ರ ಆಕ್ರೋಶಗೊಂಡಿರುವ ಕಾರ್ಯಕರ್ತರು ಮುಂದೇನು ಮಾಡಬೇಕೆಂದು ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com