
ಅಮೃತಸರ: ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಗುಂಡಿನ ಕಾಳಗದ ವೇಳೆ ನುಸುಳುತ್ತಿದ್ದ ಪಾಕಿಸ್ತಾನದ ಕಳ್ಳಸಾಗಣಿಕಾದಾರರಿಂದ ೧೨ ಕೆಜಿ ಹೆರಾಯಿನ್ ನನ್ನು ಗಡಿ ಭದ್ರತಾ ಪಡೆ (ಬಿ ಎಸ್ ಎಫ್) ವಶಪಡಿಸಿಕೊಂಡಿರುವುದಾಗಿ ಬಿ ಎಸ್ ಎಫ್ ವಕ್ತಾರ ಬುಧವಾರ ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಶಪಡಿಸಿಕೊಳ್ಳಲಾದ ಹೆರಾಯಿನ್ ೬೦ ಕೋಟಿ ಬೆಲೆ ಬಾಳುತ್ತದೆ.
ಚಂಡೀಘರ್ ನಿಂದ ೨೮೦ ಕಿಮೀ ದೂರದಲ್ಲಿರುವ ಅಮೃತಸರ ಸೆಕ್ಟಾರ್ ನ ಸಿ ಬಿ ಚಾಂದ್ ನಲ್ಲಿರುವ ಗಡಿ ತಡೆಧಾಮದಲ್ಲಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಪಂಜಾಬ್ ಪೋಲೀಸರ ಮತ್ತು ಬಿ ಎಸ್ ಎಫ್ ನ ಜಂಟಿ ಕಾರ್ಯಾಚರಣೆಯಲ್ಲಿ ಈ ದಾಳಿ ನಡೆದಿದೆ.
"ಕಳ್ಳಸಾಗಾಣಿಕಾದಾರರು ನೀರಿನ ಕಾಲುವೆಯ ಮೂಲ ಗಡಿ ದಾಟುತ್ತಿದ್ದನ್ನು ತಿಳಿದ ಬಿ ಎಸ್ ಎಫ್ ಪಡೆ ಅವರನ್ನು ತಡೆಯಲು ಪ್ರಯತ್ನಿಸಿದೆ. ನಂತರ ಕಳ್ಳಸಾಗಾಣಿಕಾದಾರರು ಗುಂಡು ಹಾರಿಸಿ ಭತ್ತದ ಗದ್ದೆಯ ಮೂಲಕ ತಪ್ಪಿಸಿಕೊಂಡಿದ್ದಾರೆ" ಎಂದು ವಕ್ತಾರ ತಿಳಿಸಿದ್ದಾರೆ.
ಈ ವರ್ಷ ಪಂಜಾಬ್ ಸೆಕ್ಟಾರ್ ನಲ್ಲಿ ಇಲ್ಲಿಯವರೆಗೂ ಬಿ ಎಸ್ ಎಫ್ ೨೩೧ ಕೆಜಿ ಹೆರಾಯಿನ್ ವಶಪಡಿಸಿಕೊಂಡಿದೆ. ೨೧೦೪ ರಲ್ಲಿ ಗರಿಷ್ಟ ಪ್ರಮಾಣದ ೩೬೧ ಕೆಜಿ ಹೆರಾಯಿನ್ ವಶಪಡಿಸಿಕೊಂಡಿತ್ತು.
Advertisement