ಕೋಲ್ಕತ್ತಾ: ಜನಪ್ರಿಯ ಬೆಂಗಾಲಿ ಕವಿ ಮಂದಕ್ರಾಂತ ಸೇನ್ ಅವರು ಬುಧವಾರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರವನ್ನು ಹಿಂದಿರುಗಿಸುವುದಾಗಿ ಹೇಳಿದ್ದಾರೆ. ಸಮಾಜದಲ್ಲಿ ಹೆಚ್ಚುತ್ತಿರುವ ಅಸಹನೆ ಮತ್ತು ಕೋಮುದ್ವೇಷವನ್ನು ವಿರೋಧಿಸಿ ಈ ಪ್ರಶಸ್ತಿ ಹಿಂದಿರುಗಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಬೆಂಗಾಲಿಯ ತಮ್ಮ ಕವನ ಸಂಕಲನಕ್ಕೆ ಸೇನ್ ಅವರು ೨೦೦೪ರಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರು.
ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಬೀಫ್ ತಿಂದ ವದಂತಿಯ ಮೇಲೆ ಮುಸ್ಲಿಂ ಒಬ್ಬನನ್ನು ಕೊಂದದ್ದು ಮತ್ತು ದೇಶದಾದ್ಯಂತ ಬಹರಹಗಾರ ಮೇಲೆ ನಡೆಯುತ್ತಿರುವ ದಾಳಿಯನ್ನು ವಿರೋಧಿಸಿ ಈ ಪುರಸ್ಕಾರವನ್ನು ಹಿಂದಿರುಗಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ದೇಶದಲ್ಲಿ ವಿಚಾರವಾದಿಗಳು ಸಂಶೋಧಕರ ಕೊಲೆ ಮತ್ತು ದಾದ್ರಿಯಲ್ಲಿ ಮೊಹಮ್ಮದ್ ಅಕ್ಲಕ್ ಅವರ ಕೊಲೆ ವಿರೋಧಿಸಿ ಇಲ್ಲಿಯವರೆಗೆ ೨೦ ಕ್ಕೂ ಹೆಚ್ಚು ಬರಹಗಾರರು ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ.
Advertisement