
ನವದೆಹಲಿ: ಅವಶ್ಯಕತೆ ಮೂಡಿದರೆ ಪಾಕಿಸ್ತಾನಿ ಗಜಲ್ ಗಾಯಕ ಗುಲಾಂ ಅಲಿ ಅವರ ಸಂಗೀತ ಕಛೇರಿ ದೇಶದ ರಾಜಧಾನಿಯಲ್ಲಿ ಯಾವುದೇ ಆಡಚಣೆಗಳಿಲ್ಲದೆ ನೆರವೇರಲು 'ಕಾರ್ಯಕರ್ತರ ಸೇನೆಯನ್ನು' ನಿಯೋಜಿಸಲು ಪಕ್ಷ ಸನ್ನದ್ಧವಾಗಿದೆ ಎಂದು ಎ ಎ ಪಿ ಪಕ್ಷದ ಹಿರಿಯ ಮುಖಂಡ ಸಂಜಯ್ ಸಿಂಗ್ ಇಂದು ಹೇಳಿದ್ದಾರೆ.
ಆದರೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಯಾವುದೇ ತೊಂದರೆಯಿಲ್ಲದೆ ಕಾರ್ಯಕ್ರಮ ನಡೆಯುವಂತೆ ನೋಡಿಕೊಳ್ಳುವುದು ದೆಹಲಿ ಪೊಲೀಸರ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.
"ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ಅಡಿಯಲ್ಲಿ ಬಿಜೆಪಿ ಪೊಲೀಸಿದೆ ಮತ್ತು ದೆಹಲಿಯಲ್ಲಿ ಮೋದಿ ಪೊಲೀಸ್ ಇದೆ ಮತ್ತು ರಾಜನಾಥ್ ಸಿಂಗ್ ಅಡಿಯಲ್ಲಿ ಕೆಲಸ ಮಾಡು ಗೃಹ ಸಚಿವಾಲಯ ದೆಹಲಿ ಭದ್ರತೆಯನ್ನು ನೋಡಿಕೊಳ್ಳುತ್ತದೆ.
"ಅವಶ್ಯಕತೆ ಮುಡಿದರೆ ಕಾರ್ಯಕ್ರಮ ಸುಸೂತ್ರವಾಗಿ ನೆರವೇರಲು ಪಕ್ಷ ಕಾರ್ಯಕರ್ತರ ಸೇನೆಯನ್ನು ನಿಯೋಜಿಸಲಿದೆ. ಕಾರ್ಯಕ್ರಮದಲ್ಲಿ ಯಾವುದೇ ದಾಂಧಲೆಯಾಗಲು ಬಿಡುವುದಿಲ್ಲ" ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಶಿವಸೇನೆ ಪಕ್ಷ ಬೆದರಿಕೆ ಹಾಕಿದ್ದಕ್ಕೆ ಮುಂಬೈನಲ್ಲಿ ನಡೆಯಬೇಕಿದ್ದ ಪಾಕಿಸ್ತಾನಿ ಗಾಯಕನ ಗಜಲ್ ಕಾರ್ಯಕ್ರಮ ರದ್ದಾಗಿತ್ತು. ನಂತರ ಗುಲಾಂ ಅಲಿ ಯವರನ್ನು ದೆಹಲಿಯಲ್ಲಿ ಕಛೇರಿ ನೀಡಲು ಅರವಿಂದ್ ಕೇಜ್ರಿವಾಲ್ ಸರ್ಕಾರ ಆಹ್ವಾನಿಸಿತ್ತು.
Advertisement