ಸಂಚಾರ ತಪ್ಪಿದವರ ಡಿಎಲ್‍ಗೆ ಸಂಚಕಾರ

ಸಿಗ್ನಲ್ ಜಂಪ್, ಟ್ರಾಪಿsಕ್ ಆದ್ರೆ ರಾಂಗ್ ರೂಟ್ ರೈಡ್, ಥ್ರಿಪಲ್ ರೈಡ್, ಪುಟಪಾಥ್ ರೈಡ್, ಕೂಲಿಂಗ್ ಗ್ಲಾಸ್ ಕಣ್ಣಲ್ಲಿ, ಹೆಲ್ಮೆಟ್ ಕೈಯಲ್ಲಿ ಇವೆಲ್ಲವೂ ರಾಜಧಾನಿಯ ವಾಹನ ಚಾಲನೆಯ ಇತ್ತೀಚಿನ ಟ್ರೆಡಿಂಗ್, ಈ ಟ್ರೆಂಡಿಂಗ್ ನಿಂದಾಗಿ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಯಾದ ಪ್ರಕರಣಗಳು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಸಿಗ್ನಲ್ ಜಂಪ್, ಟ್ರಾಪಿsಕ್ ಆದ್ರೆ ರಾಂಗ್ ರೂಟ್ ರೈಡ್, ಥ್ರಿಪಲ್ ರೈಡ್, ಪುಟಪಾಥ್ ರೈಡ್, ಕೂಲಿಂಗ್ ಗ್ಲಾಸ್ ಕಣ್ಣಲ್ಲಿ, ಹೆಲ್ಮೆಟ್ ಕೈಯಲ್ಲಿ ಇವೆಲ್ಲವೂ ರಾಜಧಾನಿಯ ವಾಹನ ಚಾಲನೆಯ ಇತ್ತೀಚಿನ ಟ್ರೆಡಿಂಗ್, ಈ ಟ್ರೆಂಡಿಂಗ್ ನಿಂದಾಗಿ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಯಾದ ಪ್ರಕರಣಗಳು ಎಷ್ಟು ಗೊತ್ತೆ? ನೀವು ಆ ಸಂಖ್ಯೆಯನ್ನು ಕೇಳಿದರೆ ಒಂದು ಕ್ಷಣ ಔಹಾರಿ ಬಿಡುತ್ತೀರಿ. ಬರೋಬ್ಬರಿ 15 ಲಕ್ಷ ಪ್ರಕರಣಗಳು ಈ ಸಾಲಿನಲ್ಲಿ ದಾಖಲಾಗಿವೆ.

ಇದರಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಾಲನೆ, ಸಿಗ್ನಲ್ ಜಂಪ್, ಮೂವರ ಸವಾರಿ, ಪಾದಚಾರಿ ರಸ್ತೆ ಮೇಲೆ ಚಾಲನೆ, ಕುಡಿದು ವಾಹನ ಚಾಲನೆ ಪ್ರಕರಣಗಳೇ ಹೆಚ್ಚಾಗಿವೆ. ಪ್ರಸಕ್ತ ಸಾಲಿನಲ್ಲಿ (ಆ.31ರವರೆಗೆ) ದಾಖಲಾಗಿರುವ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘನೆ ಮಾಡಿದ್ದ 14,280 ಸವಾರರ ಡ್ರೈವಿಂಗ್ ಲೈಸಿಂಗ್ ಪರವಾನಗಿ ರದ್ದು ಪಡಿಸುವಂತೆ ಕೋರಿ ಟ್ರಾಫಿಕ್ ಪೊಲೀಸರು ಪ್ರಾದೇಶಿಕ ಇಲಾಖೆ ಅಧಿಕಾರಿಗಳಿಗೆ (ಆರ್ ಟಿಓ) ಶಿಫಾರಸ್ಸು ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸಂಚಾರ ಮತ್ತು ಭದ್ರತೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ನಗರದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಪ್ರಸಕ್ತ ಸಾಲಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದೆ. 55 ಲಕ್ಷ ಪ್ರಕರಣ ದಾಖಲಾಗಿವೆ. ದಂಡ ಹಾಕಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಸವಾರರಿಗೆ ಕಾನೂನು ಅರಿವು ಮೂಡಿಸಲಾಗುತ್ತಿದೆ. ರಾಜ್ಯದವರು ಶೇ.80ರಷ್ಟಿದ್ದರೆ ಹೊರ ರಾಜ್ಯದವರು ಶೇ.20 ರಷ್ಟು ಮಂದಿ ಇದ್ದಾರೆ ಎಂದರು.

2015ರ ಆಗಸ್ಟ್ ಅಂತ್ಯಕ್ಕೆ 48 ಸಾವಿರಕ್ಕೂ ಅಧಿಕ ದೂರು ದಾಖಲಾಗಿವೆ. ಕಳೆದ ಬಾರಿ ವರ್ಷ ಕಳೆದರೂ ಇಷ್ಟು ದೂರು ದಾಖಲಾಗಿರಲಿಲ್ಲ. ಅಲ್ಲದೆ ಪಾದಚಾರಿ ರಸ್ತೆ ಮೇಲೆ ವಾಹನ ಚಾಲನೆ ಮಾಡುವವರ ಸಂಖ್ಯೆಹೂ ಹೆಚ್ಚುತ್ತಿದೆ. ಅವರ ಡಿಎಲ್ ರದ್ದು ಮಾಡಲೂ ಪತ್ರದಲ್ಲಿ ತಿಳಿಸಲಾಗಿದೆ. ಎಲ್ಲಾ ಪ್ರಕರಣಗಳಿಗೂ ಲೈಸೆನ್ಸ್ ರದ್ದು ಮಾಡುವುದಿಲ್ಲ. ಆಯ್ದ ಪ್ರಕರಣಗಳಲ್ಲಿ ಮಾತ್ರ ಪರವಾನಗಿ ರದ್ದು ಮಾಡಲಾಗುವುದು. ಕೆಲವೊಂದು ನಿಯಮ ಉಲ್ಲಂಘಿಸಿರುವವರ ಪರವಾನಗಿ ರದ್ದು ಮಾಡುವಂತೆ ಪತ್ರ ಬರೆಯಲಾಗಿದೆ. ಕಳೆದ ಕೆಲವರ್ಷಗಳಿಂದ ಇದು ನಿರಂತರವಾಗಿ ನಡೆಯುತ್ತಲೇ ಇದೆ. ಪ್ರತಿ ತಿಂಗಳು ಅಥವಾ 6 ತಿಂಗಳು, ವರ್ಷಕ್ಕೊಮ್ಮೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ. ಅವರು ಪರವಾನಗಿ ರದ್ದು ಮಾಡಿದ ನಂತರ ಅವರಿಗೆ ತಕ್ಷಣ ಮತ್ತೆ ಪರವಾನಗಿ ಸಿಗುವುದಿಲ್ಲ. ಅವರು ಕೆಲವರ್ಷಗಳ ನಂತರ ಹೊಸ ಪರವಾನಗಿ ಪಡೆಯಬೇಕು. ವಾಹನ ಸವಾರರು ಕಾನೂನು ಪ್ರಕಾರ ಚಾಲನೆ ಮಾಡಿದರೆ ದಂಡ ಹಾಕುವ ಪ್ರಮೇಯವೇ ಬರುವುದಿಲ್ಲ. ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗುತ್ತವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com