ಜಪಾನಿನ ದೇವಾಲಯದಲ್ಲಿ ಜೀರ್ಣೋದ್ಧಾರವಾದ ೮೦೦ ವರ್ಷದ ಹಳೆಯ ಬುದ್ಧನ ಪ್ರತಿಮೆ

ಜಪಾನಿನ ಟೋಡೈಜಿ ದೇವಾಲಯ ಆವರಣದಲ್ಲಿ ಜೀರ್ಣೋದ್ಧಾರವಾದ ಬುದ್ಧನ ಪ್ರತಿಮೆ ಸಾರ್ವಜನಿಕರಿಗೆ ಮುಕ್ತವಾಗಿದೆ ಎಂದು ಮಂಗಳವಾರ ಮಾಧ್ಯಮವೊಂದು ವರದಿ ಮಾಡಿದೆ.
ಟೋಡೈಜಿ ದೇವಾಲಯ
ಟೋಡೈಜಿ ದೇವಾಲಯ

ಟೋಕಿಯೋ: ಜಪಾನಿನ ಟೋಡೈಜಿ ದೇವಾಲಯ ಆವರಣದಲ್ಲಿ ಜೀರ್ಣೋದ್ಧಾರವಾದ ಬುದ್ಧನ ಪ್ರತಿಮೆ ಸಾರ್ವಜನಿಕರಿಗೆ ಮುಕ್ತವಾಗಿದೆ ಎಂದು ಮಂಗಳವಾರ ಮಾಧ್ಯಮವೊಂದು ವರದಿ ಮಾಡಿದೆ.

ದೇವಾಲಯದ ನಂದೈಮಾನ್ ಗೇಟ್ ಬಳಿ ಇರುವ ಎರಡು ಬುದ್ಧನ ಪ್ರತಿಮೆಗಳಲ್ಲಿ ಒಂದಕ್ಕೆ ಬೌದ್ಧ ವಿಧಿ ವಿಧಾನಗಳನ್ನು ನಡೆಸಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

೮೦೦ ವರ್ಷದ ಹಳೆಯ ಈ ದ್ವಾರಪಾಲಕ ಪ್ರತಿಮೆಗಳನ್ನು ಉಂಕಿ ಮತ್ತು ಕೈಕಿ ಎಂಬ ಇಬ್ಬರು ಶಿಲ್ಪಿಗಳು ನಿರ್ಮಿಸಿದ್ದರು ಎನ್ನಲಾಗಿದೆ. ಇವುಗಳನ್ನು ಜಪಾನಿನ ಪಾರಂಪರಿಕ ಸಂಪತ್ತು ಎಂದೇ ಬಣ್ಣಿಸಲಾಗುತ್ತದೆ.

೮ ನೆ ಶತಮಾನದಲ್ಲಿ ನಿರ್ಮಿಸಲಾಗಿದ್ದ ಟೋಡೈಜಿ ದೇವಾಲಯಯದಲ್ಲಿ ವಿಶ್ವದ ಅತಿ ದೊಡ್ಡ ಕಂಚಿನ ಬುದ್ಧನ ಪ್ರತಿಮೆಯನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com