ನಂದಿಧ್ವಜ ಪೂಜೆ ವೇಳೆ ಮತ್ತೆ ಗೊಂದಲ

ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮುನ್ನ ನಡೆಯುವ ನಂದಿಧ್ವಜ ಪೂಜಾ ಕಾರ್ಯಕ್ರಮದ ವೇಳೆ ಗೊಂದಲ ಉಂಟಾಗಿತ್ತು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮುನ್ನ ನಡೆಯುವ ನಂದಿಧ್ವಜ ಪೂಜಾ ಕಾರ್ಯಕ್ರಮದ ವೇಳೆ ಗೊಂದಲ ಉಂಟಾಗಿತ್ತು.

ಅರಮನೆಯ ಬಲರಾಮ ದ್ವಾರದಲ್ಲಿರುವ ಕೋಟೆ ಆಂಜನೇಯ ದೇವಾಲಯಕ್ಕೆ ಈ ಬಾರಿ ಕೂಡ ಎರಡು ನಂದಿಧ್ವಜ ಆಗಮಿಸಿದ್ದು,  ಒಂದು ಧ್ವಜಕ್ಕೆ ಪೂಜೆ ಸಲ್ಲಿಸಿ ಜಂಬೂಸವಾರಿಗೆ ಚಾಲನೆ  ನೀಡುವುದು ಇಲ್ಲಿಯವರೆಗೆ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ. ಆದರೆ ಪೂಜೆಗೆ ಗೌರಿಶಂಕರ ಮತ್ತು ಗುರು ಮಲ್ಲೇಶ್ವರ ಮಠದಿಂದ ಎರಡು ನಂದಿಧ್ವಜ ಆಗಮಿಸಿದ್ದು, ಕಳೆದ  ವರ್ಷದಂತೆ ಈ ವರ್ಷವೂ ನಂದಿಧ್ವಜ ಪೂಜೆಯಲ್ಲಿ ಗೊಂದಲ ಉಂಟಾಗಿತ್ತು ಎಂದು ತಿಳಿದುಬಂದಿದೆ.

2015. ಕ್ರಿ.ಶ. 1640ರಲ್ಲಿ ಶ್ರೀರಂಗಪಟ್ಟಣದಲ್ಲಿ ಆರಂಭವಾದ ಜಂಬೂಸವಾರಿ ಸಾಂಪ್ರದಾಯಿಕ ಮೆರವಣಿಗೆಗೆ, ನಾಡಿನ ಮುಖ್ಯಮಂತ್ರಿಗಳು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಅಧಿಕೃತ  ಚಾಲನೆ ನೀಡುವುದು ಪದ್ದತಿ. ಸುತ್ತೂರು ಮಠದಲ್ಲಿ ಶ್ರೀಗಳ ಆಶೀರ್ವಾದ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನ 12.07 ಗಂಟೆಯಿಂದ 12.21ರ ಮಹೂರ್ತದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಬಳಿಕ 12.31ರಿಂದ 2ರೊಳಗಿನ ಧನುರ್ ಲಗ್ನದಲ್ಲಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಈ ಬಾರಿಯೂ ಅರ್ಜುನ ನಾಲ್ಕನೇ ಬಾರಿಗೆ 750 ಕೆಜಿ ತೂಕದ ಅಂಬಾರಿ  ಹೊರಲಿದ್ದಾನೆ. ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಅರಣ್ಯ ಇಲಾಖೆಯ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com