ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ : ಸಚಿವ ವಿಕೆ ಸಿಂಗ್

ನಾನು ಏನು ಹೇಳಿದ್ದೇನೋ, ಈಗ ಏನು ಹೇಳುತ್ತಿದ್ದೇನೋ ಅದರಲ್ಲಿ ಯಾವುದೇ ದ್ವಂದ್ವಾರ್ಥವಿಲ್ಲ. ನಾನು ದಲಿತ ಮಕ್ಕಳ ದಹನ...
ವಿಕೆ ಸಿಂಗ್
ವಿಕೆ ಸಿಂಗ್
Updated on: 
ನವದೆಹಲಿ: ಹರ್ಯಾಣದಲ್ಲಿ ಇಬ್ಬರು ದಲಿತ ಮಕ್ಕಳ ಸಜೀವ ದಹನ ಪ್ರಕರಣದ ಬಗ್ಗೆ ಮಾತಾಡುವಾಗ ಪ್ರತಿಯೊಂದು ಘಟನೆಗೂ ಕೇಂದ್ರ ಸರ್ಕಾರವನ್ನು ಹೊಣೆ ಮಾಡಲು ಸಾಧ್ಯವಿಲ್ಲ. ಯಾರಾದರೂ ನಾಯಿಗೆ ಕಲ್ಲೆಸೆದರೆ ಅದಕ್ಕೂ ಸಹ ಕೇಂದ್ರ ಸರ್ಕಾರವನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ವಿ.ಕೆ ಸಿಂಗ್  ಈಗ ಸ್ಪಷ್ಟನೆಯೊಂದಿಗೆ ಮುಂದೆ ಬಂದಿದ್ದಾರೆ.
ಫರೀದಾಬಾದ್‌ನಲ್ಲಿ ಇಬ್ಬರು ಮಕ್ಕಳನ್ನು ಸುಟ್ಟು ಕೊಂದಿರುವುದು ಅಮಾನವೀಯ ಕೃತ್ಯ. ನಮ್ಮ ಸಮಾಜ ಯಾವ ರೀತಿ ಇದೆ ಎಂಬುದಕ್ಕೆ ಈ ಘಟನೆ ಸಾಕ್ಷಿ.
ಇಬ್ಬರು ಕುಟುಂಬಗಳ ನಡುವಿನ ಕಲಹವೇ ಈ ಘಟನೆಗೆ ಕಾರಣ. ನಮ್ಮ ಸಮಾಜದಲ್ಲಿ ವಿವಿಧ ರೀತಿಯ ಜನರಿರುತ್ತಾರೆ. ಅಸ್ವಸ್ಥ ಮನಸುಗಳ ಹೇಯ ಕೃತ್ಯಕ್ಕೆ ಸರ್ಕಾರವನ್ನು ಹೊಣೆ ಮಾಡಲು ಸಾಧ್ಯವಿಲ್ಲ. ಅದ್ಯಾವುದೇ ಪಕ್ಷವೇ ಇರಲಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು. ನನ್ನ ಮಾತುಗಳನ್ನು ತಿರುಚಿ ಬೇರೆ ಅಪಾರ್ಥ ಮಾಡಿಕೊಳ್ಳಲಾಗಿದೆ.
ನಾನು ಏನು ಹೇಳಿದ್ದೇನೋ, ಈಗ ಏನು ಹೇಳುತ್ತಿದ್ದೇನೋ ಅದರಲ್ಲಿ ಯಾವುದೇ ದ್ವಂದ್ವಾರ್ಥವಿಲ್ಲ. ನಾನು ದಲಿತ ಮಕ್ಕಳ ದಹನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ದ್ವಂದ್ವಾರ್ಥದ ಹೇಳಿಕೆ ನೀಡಿಲ್ಲ ಎಂದು ವಿಕೆ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com