
ಬೆಂಗಳೂರು: ದೊಡ್ಡಬಳ್ಳಾಪುರ ನಗರ ಠಾಣೆ ಪಿಎಸ್‌ಐ ಜಗದೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಜಗದೀಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಮಧು ಹಾಗೂ ಹರೀಶ್ ಬಾಬುಗೆ ಸಹಾಯ ಮಾಡುತ್ತಿದ್ದ ಹನುಮಂತರಾಮುನನ್ನು ಪೊಲೀಸರು ಇಂದು ಕರ್ನೂಲ್ ನಲ್ಲಿ ಬಂಧಿಸಿದ್ದು, ಆತನಿಂದ ಜಗದೀಶ್ ಅವರ ಪಿಸ್ತೂಲ್, ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳಾದ ಮಧು ಹಾಗೂ ಹರೀಶ್ ಬಾಬು ಹೇಳಿಕೆ ಆಧರಿಸಿ ಆಂಧ್ರಪ್ರದೇಶದ ಕರ್ನೂಲಿಗೆ ತೆರಳಿದ್ದ ಪೊಲೀಸರು, ಇಂದು ಚಿನ್ನಾಭರಣ ವ್ಯಾಪಾರಿ ಹನುಮಂತರಾಮು ಎಂಬಾತನ ವಶಕ್ಕೆ ಪಡೆದಿದ್ದಾರೆ.
ಅಕ್ಟೋಬರ್ 16ರಂದು ಜಗದೀಶ್ ರನ್ನು ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ಹರೀಶ್ ಬಾಬು (48) ಮತ್ತು ಮಧು (26) ಅವರನ್ನು ಮಹಾರಾಷ್ಟ್ರ ಕ್ರೈಂ ಬ್ರಾಂಚ್ ಪೊಲೀಸರು ನಾಗಪುರ ರೈಲು ನಿಲ್ದಾಣದಲ್ಲಿ ಬಂಧಿಸಿದ್ದರು.
Advertisement