ಸಾಂದರ್ಭಿಕ ಚಿತ್ರ
ಪ್ರಧಾನ ಸುದ್ದಿ
ಶಿವಸೇನಾ ನಾಯಕನ ಮೇಲೆ ಗುಂಡಿನ ದಾಳಿ; ಸ್ಥಿತಿ ಗಂಭೀರ
ನೆನ್ನೆ ಮುಂಬೈನಲ್ಲಿ ಶಿವ ಸೇನಾ ನಾಯಕ ಅನಿಲ್ ಚೌಹಾನ್ ಅವರ ಮೇಲೆ ಗುರುತು ಹಚ್ಚದ ಇಬ್ಬರು ಗುಂಡಿನ ದಾಳಿ ನಡೆಸಿದ್ದಾರೆ.
ಮುಂಬೈ: ನೆನ್ನೆ ಮುಂಬೈನಲ್ಲಿ ಶಿವ ಸೇನಾ ನಾಯಕ ಅನಿಲ್ ಚೌಹಾನ್ ಅವರ ಮೇಲೆ ಗುರುತು ಹಚ್ಚದ ಇಬ್ಬರು ಗುಂಡಿನ ದಾಳಿ ನಡೆಸಿದ್ದಾರೆ.
ತಲೆಗೆ ಗುಂಡಿಟ್ಟು ಹೊಡೆದಿರುವ ದುಷ್ಕರ್ಮಿಗಳು ನಂತರ ಪರಾರಿಯಾಗಿದ್ದಾರೆ. ರಾತ್ರಿ ಸುಮಾರು ೮:೧೫ ಕ್ಕೆ ಈ ಘಟನೆ ನಡೆದಿದ್ದು ಅನಿಲ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಇದು ವ್ಯಯಕ್ತಿಕ ದ್ವೇಷ ಇರಬಹುದು ಎಂದಿರುವ ಪೊಲೀಸರು "ಕೆ ಎ ಎಂ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ. ಎಫ್ ಐ ಆರ್ ದಾಖಲು ಮಾಡಲಾಗಿದ್ದು ತನಿಖೆ ಪ್ರಾರಂಭವಾಗಿದೆ" ಎಂದು ಪೊಲೀಸ್ ಸಹ ನಿರ್ದೇಶಕ ಅವಿನಾಶ್ ಅಂಬುರೆ ಮಾಧ್ಯಮಕ್ಕೆ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ