ಫರೀದಾಬಾದ್ ಮಿನಿ ಹಿಂದೂಸ್ತಾನ್ ಆಗಿ ಬಿಟ್ಟಿದೆ: ಮೋದಿ

ಎಲ್ಲಿ ಅಭಿವೃದ್ಧಿ ಇದೆಯೋ ಅಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ರೈತರಿಗೆ ಲಾಭ ಸಿಗುತ್ತದೆ, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಮತ್ತು ಬಡವರಿಗೆ...
ದೆಹಲಿ -ಫರೀದಾಬಾದ್‌ ಮೆಟ್ರೋ ಉದ್ಘಾಟಿಸಿದ ಮೋದಿ
ದೆಹಲಿ -ಫರೀದಾಬಾದ್‌ ಮೆಟ್ರೋ ಉದ್ಘಾಟಿಸಿದ ಮೋದಿ

ನವದೆಹಲಿ: ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಬದಾರ್‌ಪುರ್‌ನಿಂದ ಎಸ್ಕೋರ್ಟ್ಸ್ ಮುಜೇಸರ್ (ಫರೀದಾಬಾದ್) ನಡುವಿನ ಮೆಟ್ರೋ ರೈಲು ಸಂಚಾರವನ್ನು ಉದ್ಘಾಟಿಸಿದ್ದಾರೆ.

ಮೆಟ್ರೋ ರೈಲು ಸಂಚಾರವನ್ನು ಉದ್ಘಾಟಿಸಿದ ಮಾತನಾಡಿದ ಮೋದಿಯವರ ಭಾಷಣದ ಮುಖ್ಯಾಂಶಗಳು

  • ಫರೀದಾಬಾದ್‌ನ ಸ್ಫೋರ್ಟ್ಸ್ ಕಾಂಪ್ಲೆಕ್ಸ್ ಗೆ ಆಗಮಿಸಿದ ಮೋದಿ ಭಾರತ್ ಮಾತಾ ಕಿ ಜೈ, ಜೈ ಜವಾನ್ ಜೈ ಕಿಸಾನ್ ಎಂದು ಹೇಳಿ ತಮ್ಮ ಭಾಷಣವನ್ನಾರಂಭಿಸಿದ್ದಾರೆ.
  • ಎಲ್ಲಿ ಅಭಿವೃದ್ಧಿ ಇದೆಯೋ ಅಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ರೈತರಿಗೆ ಲಾಭ ಸಿಗುತ್ತದೆ, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಮತ್ತು ಬಡವರಿಗೆ ವಸತಿ ಸಿಗುತ್ತದೆ. ನಾವಿಲ್ಲಿ ಅಭಿವೃದ್ಧಿಯಯನ್ನು ಮಾಡುವ ಕಾರ್ಯ ಶುರು ಮಾಡಿದ್ದೇವೆ.
  • ಕೆಲವೊಂದು ಕಾರ್ಯಗಳು ಅಪೂರ್ಣವಾಗಿದ್ದರೆ ಅದನ್ನು ಪೂರ್ಣಗೊಳಿಸುವ ಹೊಣೆ ಸರ್ಕಾರದ್ದು. ಟೀಕೆ ಮಾಡುವುದರಲ್ಲಿ ಸಮಸ್ಯೆ ಬಗೆ ಹರಿಯುವುದಿಲ್ಲ.
  • ಪ್ರತೀ ಬಡವನಿಗೆ ಮನೆ ಸಿಗಬೇಕು. ಇದು ಕಷ್ಟ ಆಗಿದ್ದರೂ ನಾವು ಅದನ್ನು ಮಾಡುತ್ತೇವೆ. ಬಡವರಿಗೆ ಎಲ್ಲ ರೀತಿಯ ಸೌಕರ್ಯಗಳಿರುವ ಮನೆಯನ್ನೊದಗಿಸುವ ಯೋಜನೆಯನ್ನು ವೆಂಕಯ್ಯ ನಾಯ್ಡು ನನ್ನ ಮುಂದಿರಿಸಿದ್ದಾರೆ.
  • ರಾಜ್ಯ  ಮತ್ತು ಕೇಂದ್ರ ಸರ್ಕಾರಗಳು ಒಗ್ಗೂಡಿ ಕಾರ್ಯವೆಸಗುವುದರಿಂದ ಮುನ್ನಡೆ ಸಾಧಿಸಬಹುದು. ಅಭಿವೃದ್ಧಿ ಹೊಂದಲು ಮೂಲಸೌಕರ್ಯಗಳು ಅತೀ ಅಗತ್ಯ.
  • ಮೆಟ್ರೋ ಸಂಚಾರ ಇಲ್ಲಿಗೇ ನಿಲ್ಲುವುದಿಲ್ಲ . ನಾವು ಅದನ್ನು ಬಲ್ಲಾಬಾಗಢ್ ವರೆಗೆ ಮುಂದುವರಿಸುತ್ತೇವೆ.
  • ಫರೀದಾಬಾದ್‌ನಲ್ಲಿ ನಾನು ಅಭಿವೃದ್ಧಿಯನ್ನು ಕಂಡಿದ್ದೇನೆ. ಫರೀದಾಬಾದ್ ಮಿನಿ ಹಿಂದೂಸ್ತಾನ್ ಆಗಿ ಬಿಟ್ಟಿದೆ.
  • ನಿನ್ನೆ ನಾವು ಜನ್ಮಾಷ್ಟಮಿ ಆಚರಿಸಿದ್ದೇವೆ. ಈ ಹಬ್ಬಗಳನ್ನು ಆಚರಿಸುವಾಗ ನಾವು ದ್ವಾರಕೆಯನ್ನು ಮಾತ್ರವಲ್ಲ ಹರ್ಯಾಣವನ್ನೂ ನೆನಪಿಸಿಕೊಂಡಿರುತ್ತೇವೆ. ಶ್ರೀಕೃಷ್ಣನ ಹೆಸರಿನಲ್ಲಿಯೇ  ಕುರುಕ್ಷೇತ್ರ ಕೂಡಾ ಸ್ಮರಿಸಲ್ಮಡುತ್ತದೆ.
  • ವಿಶ್ವದಾದ್ಯಂತ ಆರ್ಥಿಕ ಕುಸಿತದ ಸಂದರ್ಭದಲ್ಲೂ ಅಚಲವಾಗಿ ನಿಂತ ದೇಶವೆಂದರೆ ಹಿಂದೂಸ್ತಾನ.
  • ಹರ್ಯಾಣವೀಗ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯ ಮೂಲಕ ಪ್ರಖ್ಯಾತವಾಗಿದೆ. ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಫರೀದಾಬಾದ್ ಹೆಸರು ಕೂಡಾ ಇತ್ತು.
  • ಹರ್ಯಾಣದ ಚುನಾವಣಾ ಪ್ರಚಾರದ ವೇಳೆ ನಾನು ಏಕ ಶ್ರೇಣಿ ಏಕ ಪಿಂಚಣಿ ಯೋಜನೆಯ ಬಗ್ಗೆ  ಪ್ರಸ್ತಾಪಿಸಿದ್ದೆ. ಈ ಯೋಜನೆ ಕಳೆದ 42 ವರ್ಷದಿಂದ ಹಾಗೆಯೇ ಇತ್ತು. ಯೋಧರನ್ನು ಗೌರವಿಸುವುದಕ್ಕಿಂತ ಪ್ರಮುಖವಾದ ಕೆಲಸ ಬೇರೊಂದಿಲ್ಲ.  ಇದೆಲ್ಲ ಸುಲಭದ ಕೆಲಸ ಅಲ್ಲೇದ ಇದ್ದರೂ ನಾವು ಆ ಕಾರ್ಯಗಳಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ.
  • ಏಕ ಶ್ರೇಣಿ ಏಕ ಪಿಂಚಣಿ ಯೋಜನೆ ಜಾರಿಗೆ ಮಾಡುವ ಮುನ್ನ ಇದು ರು. 500 ಕೋಟಿಯಲ್ಲಿ ಕಾರ್ಯರೂಪಕ್ಕೆ ತರುವುದು ಸಾಧ್ಯವಿಲ್ಲ ಎಂದು ಅನಿಸಿತು. ಅದಕ್ಕೆ ರು.8,000 ಕೋಟಿಯಿಂದ ದಿಂದ 10,000 ಕೋಟಿ ಬೇಕಿತ್ತು. ನಮ್ಮ ಸರ್ಕಾರ ಅದನ್ನು ಕಾರ್ಯರೂಪಕ್ಕೆ ತರಲು ತೀರ್ಮಾನಿಸಿತು. ನಮ್ಮ ಸೇನೆಯಲ್ಲಿ ಹೆಚ್ಚಿನ ಸೈನಿಕರು ಕೆಳಹಂತದ ಹುದ್ದೆಯಲ್ಲಿರುವವರಾಗಿದ್ದಾರೆ. ಸೇನೆಯಿಂದ ಬಿಟ್ಟ ಎಲ್ಲ ಸಿಬ್ಬಂದಿಗಳಿಗೂ ಈ ಯೋಜನೆಯ ಫಲ ಸಿಗಲಿದೆ.
  • ಸ್ವಯಂ ನಿವೃತ್ತಿ (ವಿಆರ್ಎಸ್) ಹೊಂದಿದವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ ಎಂದು ಹೇಳಿ ಕೆಲವರು ಹಾದಿ ತಪ್ಪಿಸುತ್ತಿದ್ದಾರೆ. ಆದರೆ ಸೇನೆಯಲ್ಲಿದ್ದು ಸ್ವಯಂ ನಿವೃತ್ತಿ ಹೊಂದಿದವರಿಗೂ ಈ ಯೋಜನೆ ಅನ್ವಯಿಸುತ್ತದೆ.
  • ಮಾಜಿ ಯೋಧರಿಗೆ ಈ ಮೂಲಕ ನಾವು ಗೌರವವನ್ನು ಸಲ್ಲಿಸಿದ್ದೇವೆ. ಹೆಚ್ಚಿನ ಜನರು ಇದರಲ್ಲಿ ರಾಜಕಾರಣ ಮಾಡುತ್ತಾರೆ.  40 ವರ್ಷ ಏನೂ ಮಾಡದೇ ಇದ್ದವರಿಗೆ ಈ ಬಗ್ಗೆ ಹೇಳಲು ಮತ್ತು ಯೋಧರ ಪರವಾಗಿ ಮಾತನಾಡಲು ಹಕ್ಕಿಲ್ಲ
  • ಭಾರತ ಮಾತಾ ಕಿ ಜೈ, ಜೈ ಜವಾನ್ ಜೈ ಕಿಸಾನ್ ಎಂದು ಹೇಳಿ ಮೋದಿ ಭಾಷಣ ಮುಗಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com